ಹೊಸಪೇಟೆ : ನಗರದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ರಿಪೇರಿಗೆ ಬಂದಿವೆ. ಹೊಸ ಕ್ಯಾಮರಾ ಅಳವಡಿಸಲು ಎಸ್ಪಿ ಸೈದುಲು ಅಡಾವತ್ ನೇತೃತ್ವದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿವೈಎಸ್ಪಿ ವಿ.ರಘುಕುಮಾರ್ ಹೇಳಿದ್ದಾರೆ.
ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಾತನಾಡಿದ ಅವರು, ಈ ಮುಂಚೆಯೂ ಕ್ಯಾಮರಾಗಳನ್ನು ರಿಪೇರಿ ಮಾಡಲಾಗಿತ್ತು. ಆದರೂ ಕಾರ್ಯ ನಿರ್ವಹಿಸುತ್ತಿಲ್ಲ. 53 ಕ್ಯಾಮರಾಗಳು ನಗರದಲ್ಲಿದ್ದು, ಹೊಸದಾಗಿ ಎಷ್ಟು ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಸರ್ವೆ ನಡೆಸಲಾಗುತ್ತಿದೆ. ಕ್ರೈಂ ಮತ್ತು ಟ್ರಾಫಿಕ್ ಗೆ ಸಂಬಂಧಿಸಿದಂತೆ ಕ್ಯಾಮರಾಗಳನ್ನು ಅಳವಡಿಸಲಿದ್ದು, ನಗರಸಭೆಯಿಂದ ಬಜೆಟ್ ಮಂಜೂರಾಗಲಿದೆ ಎಂದರು.
ನಗರದ ಕೆಲ ಕಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ನಿರ್ವಹಣೆ ಹೇಗೆ ಮಾಡಬೇಕೆಂಕು ಚರ್ಚಿಸಲಾಗುತ್ತಿದೆ. ಜನರು ಟ್ರಾಫಿಕ್ ನಿಯಮಗಳನ್ನು ಅನುಸರಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಹೊಸ ಸಿಸಿ ಕ್ಯಾಮೆರಾ ಅಳವಡಿಸಲು ಪ್ರಸ್ತಾವನೆ : ಡಿವೈಎಸ್ಪಿ ವಿ.ರಘುಕುಮಾರ್ - ಸಿಸಿ ಕ್ಯಾಮೆರಾ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಕೆ
ಹೊಸಪೇಟೆಯಲ್ಲಿ ಟ್ರಾಫಿಕ್ ಜಾಂ ಹಾಗೂ ಕ್ರೈಂಗಳನ್ನು ನಿಗ್ರಹಿಸಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ನಗರದಲ್ಲಿ ಅಳವಡಿಸಿರುವ ಕ್ಯಾಮೆರಗಾಳು ರಿಪೇರಿಗೆ ಬಂದಿದ್ದು, ಹೊಸ ಕ್ಯಾಮೆರಾ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಅಂತಾ ಡಿವೈಎಸ್ಪಿ ವಿ.ರಘುಕುಮಾರ್ ಹೇಳಿದ್ದಾರೆ.
ಡಿವೈಎಸ್ಪಿ ವಿ.ರಘುಕುಮಾರ್
ಈ ವೇಳೆ ಟಿಬಿ ಡ್ಯಾಂ ಸಿಪಿಐ ನಾರಾಯಣ, ಪಟ್ಟಣ ಠಾಣೆಯ ಪಿಐ ಶ್ರೀನಿವಾಸ್, ಸಂಚಾರಿ ಪೊಲೀಸ್ ಠಾಣೆಯ ಪಿಐ ಮಹಾಂತೇಶ್ ಸಜ್ಜನ್ ಉಪಸ್ಥಿತರಿದ್ದರು.