ಹೊಸಪೇಟೆ:ಮಂಡ್ಯದಲ್ಲಿ ಬರ್ಬರವಾಗಿ ಕೊಲೆಯಾಗಿದ್ದ ಬಾಲಕಿಯ ಮನೆಗೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಭೇಟಿ ನೀಡಿ, ಆಕೆಯ ಕುಟುಂಬಕ್ಕೆ ಸ್ವಾಂತನ ಹೇಳಿದರು.
ಮಂಡ್ಯದಲ್ಲಿ ಕೊಲೆಯಾದ ಬಾಲಕಿ ಮನೆಗೆ ಶಾಸಕ ಭೀಮಾನಾಯ್ಕ ಭೇಟಿ.. ಸಾಂತ್ವನ - A murdered girl in Mandya
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಮಂಡ್ಯದಲ್ಲಿ ಬರ್ಬರವಾಗಿ ಕೊಲೆಯಾಗಿದ್ದ ಬಾಲಕಿಯ ಮನೆಗೆ ಭೇಟಿ ನೀಡಿ, ಆಕೆಯ ಕುಟುಂಬ ವರ್ಗಕ್ಕೆ ಸ್ವಾಂತನ ಹೇಳಿದರು.
ಭೀಮಾನಾಯ್ಕ
ಇದೇ ಸಂದರ್ಭದಲ್ಲಿ ಬಾಲಕಿ ತಾಯಿಯಿಂದ ಘಟನೆ ವಿವರ ಪಡೆದುಕೊಂಡರು. ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಕರಣ ಕುರಿತು ಸಮಗ್ರ ತನಿಖೆ ಮಾಡಬೇಕು. ಅಲ್ಲದೇ ಕೃತ್ಯ ಎಸೆಗಿದ ಯುವಕನಿಗೆ ಗಲ್ಲಿಗೇರಿಸಬೇಕು. ಅಧಿವೇಶನದಲ್ಲಿ ಘಟನೆ ಕುರಿತು ಗಮನ ಸೆಳೆಯಲಾಗುವುದು. ಸರ್ಕಾರದಲ್ಲಿ ಸಿಗುವಂತಹ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಹೇಳಿದರು.