ಕರ್ನಾಟಕ

karnataka

ETV Bharat / state

ತಾ.ಪಂ. ಅಧ್ಯಕ್ಷನ ಗುಂಡಿಟ್ಟು ಕೊಂದಿದ್ದ ಪ್ರಕರಣ... ಕೊಲೆ ಆರೋಪಿ ಅನುಮಾನಾಸ್ಪದ ಸಾವು - ಹೊಸಪೇಟೆಯಲ್ಲಿ ಅನುಮಾಸ್ಪದವಾಗಿ ವ್ಯಕ್ತಿಯ ಹತ್ಯೆ

ಹೊಸಪೇಟೆ ತಾಲೂಕು ಪಂಚಾಯತ್​ ಅಧ್ಯಕ್ಷನಿಗೆ ಗುಂಡಿಟ್ಟು ಕೊಂದಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೊಸಪೇಟೆ-ಕಂಪ್ಲಿ ಮಾರ್ಗದ ರಸ್ತೆಯಲ್ಲಿ ನಡೆದಿದೆ.

Hospet Murder case
ಚಂದ್ರೇಗೌಡ ಮೃತ ಆರೋಪಿ

By

Published : Feb 18, 2020, 4:36 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕು ಪಂಚಾಯತ್​ ಅಧ್ಯಕ್ಷನಿಗೆ ಗುಂಡಿಟ್ಟು ಕೊಂದಿದ್ದ ಪ್ರಕರಣದ ಪ್ರಮುಖ ಆರೋಪಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಹೊಸಪೇಟೆ-ಕಂಪ್ಲಿ ಮಾರ್ಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಚಂದ್ರೇಗೌಡ ಮೃತ ಆರೋಪಿ

ಕಂಪ್ಲಿ ತಾಲೂಕಿನ ರಾಮಸಾಗರದ ನಿವಾಸಿ ಚಂದ್ರೇಗೌಡ ಮೃತ ವ್ಯಕ್ತಿ. ಕಂಪ್ಲಿ ತಾಲೂಕಿನ ರಾಮಸಾಗರ ಕಣವಿ ಮಾರೆಮ್ಮ ದೇಗುಲದ ಬಳಿ ಬೆಳಗ್ಗೆ ವಾಯು ವಿಹಾರಕ್ಕೆಂದು ತೆರಳಿದ್ದ ಚಂದ್ರೇಗೌಡ ಮನೆಗೆ ವಾಪಸಾಗುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಕ್ಷಣಾರ್ಧದಲ್ಲಿಯೇ ನೆಲಕ್ಕುರುಳಿ ಬಿದ್ದು, ಚಂದ್ರೇಗೌಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತ ಚಂದ್ರೇಗೌಡ 2003ರ ಜನವರಿ 26 ರಂದು ಹೊಸಪೇಟೆ ಮುನ್ಸಿಪಲ್ ಮೈದಾನದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವ ದಿನಾಚರಣೆಯ ನಿಮಿತ್ತ ರಾಷ್ಟ್ರಗೀತೆ ‌ಪ್ರಸ್ತುತಪಡಿಸುವ ಸಂದರ್ಭ ಹೊಸಪೇಟೆ ತಾಲೂಕು ಪಂಚಾಯತ್​ ಅಧ್ಯಕ್ಷ ಸೂರ್ಯನಾರಾಯಣ ಎಂಬುವರ ಎದೆಗೆ ಗುಂಡು ಹಾರಿಸಿ‌ ಕೊಲೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದರು. ಆ ಪ್ರಕರಣ ನಡೆದು 17 ವರ್ಷಗಳೇ ಗತಿಸಿವೆ. ಗುಂಡಿನ ದಾಳಿಗೆ ಒಳಗಾಗಿ ಸಾವನ್ನಪ್ಪಿದ್ದ ಸೂರ್ಯನಾರಾಯಣ ಅವರ ಕಡೆಯವ್ರೇ ಈ ಕೊಲೆ ಮಾಡಿಸರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ, ಮೂಲತಃ ಕಣವಿ ತಿಮ್ಮಲಾಪುರ ಗ್ರಾಮದವರಾದ ಚಂದ್ರೇಗೌಡರು, ಪಿತ್ರಾರ್ಜಿತ ಆಸ್ತಿಯ ವಿವಾದವನ್ನೂ ಕೂಡ ಎದರಿಸುತ್ತಿದ್ದರು. ಕುಟುಂಬಸ್ಥರ ಕಡೆಯವರಿಂದಲೂ ಈ‌ ಕೃತ್ಯ ನಡೆದಿರಬಹುದೆಂಬ ಅನುಮಾನ ಮೂಡಿದೆ.

ABOUT THE AUTHOR

...view details