ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ಮುಖ್ಯ ರಸ್ತೆಯ ರಾಜ್ಯ ಹೆದ್ದಾರಿ-25 ರಲ್ಲಿ ಬರುವ ಬೀದಿ ದೀಪದ ಕಂಬ ವಾಲಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ರಸ್ತೆಯಲ್ಲಿ ವಾಲಿದ ವಿದ್ಯುತ್ ದೀಪದ ಕಂಬ: ಆತಂಕದಲ್ಲಿ ವಾಹನ ಸವಾರರು - ಹೊಸಪೇಟೆ ಬೀದಿ ದೀಪದ ಸಮಸ್ಯೆ
ಹೊಸಪೇಟೆಯ ರಾಜ್ಯ ಹೆದ್ದಾರಿ-25 ರಲ್ಲಿ ಬರುವ ಬೀದಿದೀಪದ ಕಂಬ ವಾಲಿದ್ದು, ವಾಹನ ಸವಾರರಿಗೆ ಆತಂಕ ಮೂಡಿಸಿದೆ.
Street light
ಈ ಹಿಂದೆ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗಿತ್ತು. ಜಾಮಿಯಾ ಮಸೀದಿಯ ಮುಂಭಾಗದ ರಾಜ್ಯ ಹೆದ್ದಾರಿಯ ಮಧ್ಯೆ ಅಳವಡಿಸಲಾದ ಬೀದಿ ದೀಪದ ಕಂಬಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿತ್ತು. ಪರಿಣಾಮ ಕಂಬದ ಕೆಳಭಾಗವು ಮುರಿದು ಹೋಗಿತ್ತು.
ಇದೀಗ ಕಂಬ ಯಾವುದೇ ಸಂದರ್ಭದಲ್ಲಿ ಮುರಿದು ಬೀಳುವಂತಿದೆ. ಇದರಿಂದಾಗಿ ಜನರು ಹಾಗೂ ವಾಹನ ಸವಾರರಲ್ಲಿ ಆತಂಕ ಉಂಟಾಗಿದ್ದು, ಅವಘಡ ಸಂಭವಿಸುವ ಮುನ್ನವೇ ಸಂಬಂಧಿಸಿದ ಇಲಾಖೆ ಸಮಸ್ಯೆ ಪರಿಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.