ಹೊಸಪೇಟೆ: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡಬೇಕು ಎಂದು ನಗರದ ಕೆಲ ಅಂಗಡಿಗಳಿಗೆ ನಗರಸಭೆಯಿಂದ ನೋಟಿಸ್ ನೀಡಲಾಯಿತು.
ಹೊಸಪೇಟೆ: ನಾಮಫಲಕದಲ್ಲಿ ಕನ್ನಡ ಬಳಸದ ಅಂಗಡಿಗಳಿಗೆ ನಗರಸಭೆ ನೋಟಿಸ್ - Hospet municipality Notice
ಹೊಸಪೇಟೆ ನಗರದ ಪುಣ್ಯ ಮೂರ್ತಿ ವೃತ್ತ, ಬಸ್ ಸ್ಟ್ಯಾಂಡ್ ರಸ್ತೆ, ಸ್ಟೇಷನ್ ರಸ್ತೆ ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಪದಗಳನ್ನು ಅಳವಡಿಸಿಕೊಳ್ಳಬೇಕು ಎಂದು ನೋಟಿಸ್ ನೀಡಲಾಗಿದೆ.
![ಹೊಸಪೇಟೆ: ನಾಮಫಲಕದಲ್ಲಿ ಕನ್ನಡ ಬಳಸದ ಅಂಗಡಿಗಳಿಗೆ ನಗರಸಭೆ ನೋಟಿಸ್ hospet-notice-from-municipality-to-unused-kannada-stores](https://etvbharatimages.akamaized.net/etvbharat/prod-images/768-512-9330705-thumbnail-3x2-khg---copy.jpg)
ಹೊಸಪೇಟೆ: ನಾಮಫಲಕದಲ್ಲಿ ಕನ್ನಡ ಬಳಸದ ಅಂಗಡಿಗಳಿಗೆ ನಗರಸಭೆಯಿಂದ ನೋಟಿಸ್..
ಹೊಸಪೇಟೆ: ನಾಮಫಲಕದಲ್ಲಿ ಕನ್ನಡ ಬಳಸದ ಅಂಗಡಿಗಳಿಗೆ ನಗರಸಭೆಯಿಂದ ನೋಟಿಸ್..
ನಗರದ ಪುಣ್ಯಮೂರ್ತಿ ವೃತ್ತ, ಬಸ್ ಸ್ಟ್ಯಾಂಡ್ ರಸ್ತೆ, ಸ್ಟೇಷನ್ ರಸ್ತೆ ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಪದಗಳನ್ನು ಅಳವಡಿಸಿಕೊಳ್ಳಬೇಕು ಎಂದು ನೋಟಿಸ್ ನೀಡಲಾಗಿದೆ.
ನಗರಸಭೆ ಆರೋಗ್ಯ ನಿರೀಕ್ಷಕ ವೆಂಕಟೇಶ್ ಮಾತನಾಡಿ, ಅಂಗಡಿ ನಾಮಫಲಕಗಳಲ್ಲಿ ಅನ್ಯಭಾಷೆಗಳನ್ನು ಬಳಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಈ ಕುರಿತು ಪರಿಶೀಲಿಸಿದಾಗ ಕೆಲ ಅಂಗಡಿ ಮಾಲೀಕರು ಕನ್ನಡ ಭಾಷೆ ಬಳಸದಿರುವುದು ಕಂಡು ಬಂದಿದೆ. ಹಾಗಾಗಿ 14 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.