ಹೊಸಪೇಟೆ:ವಿಜಯನಗರ ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಮುಂದುವರಿದಿದೆ. ಇಲ್ಲಿನ ಆರೋಗ್ಯ ಇಲಾಖೆಯ 20 ಮಂದಿ ಸಿಬ್ಬಂದಿಗೂ ಕೊರೊನಾ ವಕ್ಕರಿಸಿದೆ.
ಓದಿ: 'ಗ್ರೀನ್ ಕಾರಿಡಾರ್' ಮೂಲಕ 160 ಟನ್ ಆಕ್ಸಿಜನ್ ಹೊತ್ತು ರಾಜ್ಯಕ್ಕೆ ಬಂದ ರೈಲು
ಹೊಸಪೇಟೆ:ವಿಜಯನಗರ ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಮುಂದುವರಿದಿದೆ. ಇಲ್ಲಿನ ಆರೋಗ್ಯ ಇಲಾಖೆಯ 20 ಮಂದಿ ಸಿಬ್ಬಂದಿಗೂ ಕೊರೊನಾ ವಕ್ಕರಿಸಿದೆ.
ಓದಿ: 'ಗ್ರೀನ್ ಕಾರಿಡಾರ್' ಮೂಲಕ 160 ಟನ್ ಆಕ್ಸಿಜನ್ ಹೊತ್ತು ರಾಜ್ಯಕ್ಕೆ ಬಂದ ರೈಲು
ನಾಲ್ಕು ಜನ ವೈದ್ಯರು, ಇಬ್ಬರು ಆಶಾ ಕಾರ್ಯಕರ್ತೆಯರು, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ 20 ಜನರಿಗೆ ಕೊರೊನಾ ಮಹಾಮಾರಿ ದೃಢಪಟ್ಟಿದೆ. ಹೊಸಪೇಟೆ ನಗರ ಸೇರಿದಂತೆ ಕಮಲಾಪುರ ಪಿಎಚ್ಸಿಗಳ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಹೊಸಪೇಟೆ ಟಿಎಚ್ಓ ಡಾ. ಭಾಸ್ಕರ್ ಅವರು ಮಾತನಾಡಿ, ಹೋಂ ಐಸೋಲೇಷನ್ ಇರುವರಿಗೆ ತಪಾಸಣೆ ಮಾಡುವ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಎಷ್ಟೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು ಸಹ ಕೊರೊನಾ ಕಾಣಿಸಿಕೊಂಡಿದ್ದು, ಎಲ್ಲಾ ಸಿಬ್ಬಂದಿ ಆರೋಗ್ಯವಾಗಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ, ಉಳಿದವರು ಹೋಂ ಐಸೋಲೇಷನ್ ನಲ್ಲಿ ಇದ್ದಾರೆ ಎಂದು ತಿಳಿಸಿದರು.