ಬಳ್ಳಾರಿ :ಲಾಕ್ಡೌನ್ನಿಂದಾಗಿ ತೀವ್ರ ಸಂಕಷ್ಟಕ್ಕೊಳಗಾದ ಬಡ ಕುಟುಂಬಗಳಿಗೆ ಇಲ್ಲಿನ ಹೊಸಪೇಟೆ ಫ್ರೆಂಡ್ಸ್ ಗ್ರೂಪ್ ರೇಷನ್ ಕಿಟ್ ವಿತರಿಸಿ ಮಾನವೀಯತೆ ಮೆರೆದಿದೆ. ಜಿಲ್ಲೆಯ ಹೊಸಪೇಟೆ ನಗರದ ತುಂಗಭದ್ರಾ ಜಲಾಶಯ ವ್ಯಾಪ್ತಿಯ ವೆಂಕಯ್ಯ ಕ್ಯಾಂಪಿನಲ್ಲಿರುವ ಬಡ ಮತ್ತು ಕೂಲಿ ಕಾರ್ಮಿಕರ ಕುಟುಂಬಕ್ಕೆ ಫ್ರೆಂಡ್ಸ್ ಗ್ರೂಪಿನಿಂದ ರೇಷನ್ ಕಿಟ್ ವಿತರಿಸಲಾಯಿತು.
ಸಂಕಷ್ಟದಲ್ಲಿದ್ದ ಬಡ ವರ್ಗದವರ ನೆರವಿಗೆ ಧಾವಿಸಿದ ಹೊಸಪೇಟೆಯ ಫ್ರೆಂಡ್ಸ್ ಗ್ರೂಪ್.. - ವೆಂಕಯ್ಯ ಕ್ಯಾಂಪ್
ಫ್ರೆಂಡ್ಸ್ ಗ್ರೂಪ್ ಹೆಲ್ಪ್‌ಲೈನ್ ಟೀಮ್ನ ಮುಖ್ಯಸ್ಥ ಪ್ರಕಾಶ ಕಿಚಡಿ ಅವರು ನೂರಾರು ಬಡ ಹಾಗೂ ಕೂಲಿ ಕಾರ್ಮಿಕರಿಗೆ ಅಂದಾಜು 250 ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಂಕಷ್ಟದಲ್ಲಿದ್ದ ಬಡ ವರ್ಗದವರ ನೆರವಿಗೆ ಧಾವಿಸಿದ ಹೊಸಪೇಟೆಯ ಫ್ರೆಂಡ್ಸ್ ಗ್ರೂಪ್
ಜಿಲ್ಲೆಯ ಹೊಸಪೇಟೆ ಫ್ರೆಂಡ್ಸ್ ಗ್ರೂಪ್ ಹೆಲ್ಪ್‌ಲೈನ್ ಟೀಮ್ನ ಮುಖ್ಯಸ್ಥ ಪ್ರಕಾಶ ಕಿಚಡಿ ಅವರಿಂದ ಟಿಬಿಡ್ಯಾಂ ಪ್ರದೇಶ ವ್ಯಾಪ್ತಿಯ ವೆಂಕಯ್ಯ ಕ್ಯಾಂಪ್, ನಿಶಾನಿ ಕ್ಯಾಂಪ್, ಇವಿ ಕ್ಯಾಂಪಿನ ನೂರಾರು ಬಡ ಹಾಗೂ ಕೂಲಿ ಕಾರ್ಮಿಕರಿಗೆ ಅಂದಾಜು 250 ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಂದಾಜು 1.50 ಲಕ್ಷ ರೂ. ವ್ಯಯಿಸಿ ಈ ಕಿಟ್ಗಳನ್ನ ವಿತರಿಸಲಾಗಿದೆ. ಅಕ್ಕಿ, ಬೇಳೆ, ರವೆ, ಸಕ್ಕರೆ, ಉಪ್ಪು, ಈರುಳ್ಳಿ ಸೇರಿ ದಿನಸಿ ಪದಾರ್ಥಗಳನ್ನ ಈ ಕಿಟ್ ಒಳಗೊಂಡಿದೆ.