ಹೊಸಪೇಟೆ: ವಿಕಲಚೇತನರ ಆರ್ಥಿಕ ಪುನಶ್ಚೇತನ ಯೋಜನೆಗಳನ್ನು ರೂಪಿಸುವಂತೆ ಆಗ್ರಹಿಸಿ ಗ್ರಾಮೀಣ ವಿಕಲಚೇತನರ ಸಂಘದಿಂದ ತಾಲೂಕಿನ ಹಂಪಿ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಲಾಯಿತು.
ವಿಕಲಚೇತನರ ಆರ್ಥಿಕ ಪುನಶ್ಚೇತನ ಯೋಜನೆ ರೂಪಿಸುವಂತೆ ಒತ್ತಾಯ - Economic recovery of the disabled
ಕಳೆದ ಕೆಲವು ವರ್ಷಗಳಿಂದ ವಿಲಚೇತನರಿಗಾಗಿ ಮೀಸಲಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇದರಿಂದ ವಿಕಲಚೇತನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ವಿಕಲಚೇತನರ ಆರ್ಥಿಕ ಪುನಶ್ಚೇತನ ಯೋಜನೆಗಳನ್ನು ರೂಪಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಕಳೆದ ಕೆಲವು ವರ್ಷಗಳಿಂದ ವಿಲಚೇತನರಿಗಾಗಿ ಮೀಸಲಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇದರಿಂದ ವಿಕಲಚೇತನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ದುಡಿಮೆಯಿಲ್ಲದೆ ಊಟಕ್ಕೂ ಪರದಾಡುವಂತಹ ಸ್ಥಿತಿ ಎದುರಾಗಿದೆ. ವಿಕಲಚೇತನರಿಗೆ ನೀಡಲಾಗುತ್ತಿರುವ ಮಾಸಾಶನ ಕಳೆದ 5, 6 ತಿಂಗಳಿನಿಂದ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಒಂದು ವಾರದಲ್ಲಿ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತ್ ಮುಂಭಾಗ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಮುಖಂಡರಾದ ಕೆ.ಹುಲುಗಪ್ಪ, ಗೋವಿಂದ್ ಪೂಜಾರ್ ಇನ್ನಿತರರಿದ್ದರು.