ಹೊಸಪೇಟೆ: ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಸೇರಿ ಶಾಂತಿ- ಸಡಗರಿಂದ ಯಾವುದೇ ಗಲಭೆ ಉಂಟಾಗದಂತೆ ಆಚರಣೆ ಮಾಡಲಾಗಿದೆ ಎಂದು ಹೊಸಪೇಟೆ ಅಂಜುಮಾನ್ ಕಮಿಟಿಯ ಕಾರ್ಯದರ್ಶಿ ಸೈಯದ್ ಮಹಮ್ಮದ್ ಸಂತಸ ವ್ಯಕ್ತಪಡಿಸಿದ್ದಾರೆ.
ಹೊಸಪೇಟೆಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡ ಈದ್ ಮಿಲಾದ್ ಮೆರವಣಿಗೆ - ಕಾರ್ಯದರ್ಶಿ ಸೈಯದ್ ಮಹಮ್ಮದ್
ಈದ್ ಮಿಲಾದ್ ಹಬ್ಬವನ್ನು ಎಲ್ಲರೂ ಸೇರಿ ಶಾಂತಿ- ಸಡಗರಿಂದ ಯಾವುದೇ ಗಲಭೆ ಉಂಟಾಗದಂತೆ ಆಚರಣೆ ಮಾಡಲಾಗಿದೆ ಎಂದು ಹೊಸಪೇಟೆ ಅಂಜುಮಾನ್ ಕಮಿಟಿಯ ಕಾರ್ಯದರ್ಶಿ ಸೈಯದ್ ಮಹಮ್ಮದ್ ಸಂತಸ ವ್ಯಕ್ತಪಡಿಸಿದ್ದಾರೆ.
ಹೊಸಪೇಟೆಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡ ಈದ್ ಮಿಲಾದ್ ಮೆರವಣಿಗೆ
ನಗರದಲ್ಲಿ ಇಂದು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹಿಂದೂ ಮತ್ತು ಮುಸ್ಲಿಂ ಬಾಂಧವರು ಸಡಗರ ಮತ್ತು ಸಂಭ್ರಮದಿಂದ ಹಬ್ಬವನ್ನು ಮೆರವಣಿಗೆಯ ಮೂಲಕ ಆಚರಣೆ ಮಾಡಿದರು. ಮುಸ್ಲಿಮರು ಶಾಂತಿಯನ್ನು ಸೂಚಿಸುವರು ಅವರು ಯಾವ ವ್ಯಕ್ತಿಗೆ ಕೆಟ್ಟದ್ದನ್ನು ಮಾಡುವವರಲ್ಲ ಶಾಂತಿ ಸಹನೆಯಿಂದ ಕೆಲಸವನ್ನು ಮಾಡುತ್ತಾರೆ. ಭಾರತೀಯರಾದ ನಾವೆಲ್ಲ ಶಾಂತಿ ಪ್ರಿಯರು ವಿವಿಧ ಆಚಾರ -ವಿಚಾರ ಸಂಪ್ರಾದಾಯಗಳನ್ನು ಮಾಡಿಕೊಂಡು ಬಂದಿದ್ದೇವೆ ಎಂದರು.