ಹೊಸಪೇಟೆ (ವಿಜಯನಗರ):ಬಿಹಾರ ದ್ವಿತೀಯ ಪಿಯುಸಿ ಸಿಬಿಎಸ್ಸಿ ಪರೀಕ್ಷೆಯಲ್ಲಿ ಹೊಸಪೇಟೆಯ ಪಟೇಲ್ ನಗರ ಮೂಲದ ವಿದ್ಯಾರ್ಥಿನಿ ವೈ. ಅಶ್ವಿನಿ ಪಾಟ್ನಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ.
ಪಾಟ್ನಾದ ಕೇಂದ್ರೀಯ ವಿದ್ಯಾಲಯದ 2020/21ನೇ ಸಾಲಿನ ಸಿಬಿಎಸ್ಸಿ ಪರೀಕ್ಷೆಯಲ್ಲಿ ಶೇ.99ರಷ್ಟು ಅಂಕ ಪಡೆದು ಪಾಟ್ನಾ ವಿಭಾಗಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ.