ಹೊಸಪೇಟೆ (ಬಳ್ಳಾರಿ): ಹೊಸಪೇಟೆ ಮುಖ್ಯರಸ್ತೆ ಹಾಗೂ ಉಪರಸ್ತೆಗಳ ಒಳಚರಂಡಿ (ಯುಜಿಡಿ) ಓವರ್ ಫ್ಲೋ ಆಗಲು ಸ್ಯಾನಿಟರಿ ನ್ಯಾಪಕಿನ್, ನಿರುಪಯುಕ್ತ ಬಟ್ಟೆಗಳನ್ನು ಶೌಚಗೃಹ ಮತ್ತು ಸ್ನಾನಗೃಹ ಪೈಪುಗಳ ಮೂಲಕ ಬಿಸಾಡುವುದು ಮುಖ್ಯ ಕಾರಣವಾಗಿತ್ತು. ಓವರ್ ಫ್ಲೋ ಆಗಲು ಕಾರಣಿಕರ್ತರಾದ ಮನೆ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಂಗಳ ಹಿಂದೆ ನಗರಸಭೆಯ ಪೌರಾಯುಕ್ತೆ ಜಯಲಕ್ಷ್ಮಿ ಅವರು ಹೇಳಿದ್ದರು. ಆದರೆ, ಇಲ್ಲಿವರೆಗೂ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ, ಮನೆ ಮಾಲೀಕರಿಗೆ ಕೇವಲ ನೋಟಿಸ್ ನೀಡಿ ಕೈ ತೊಳೆದುಕೊಂಡಿದ್ದಾರೆ.
ಜುಲೈ 20 ರಂದು ನಗರಸಭೆ ಪೌರಾಯುಕ್ತೆ ಜಯಲಕ್ಷ್ಮಿ ಅವರು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಆದರೆ, ಇಲ್ಲಿವರೆಗೂ ಎಂಟು ಜನರಿಗೆ ನೋಟಿಸ್ ನೀಡಿದ್ದಾರೆ. ಒಂದೂವರೆ ತಿಂಗಳು ಕಳೆದರೂ ಒಂದೇ ಒಂದು ದೂರು ದಾಖಲಾಗಿಲ್ಲ. ನಗರದ ನೆಹರು ಕಾಲೋನಿ, ಎಂ.ಜಿ.ನಗರ, ಜೆ.ಪಿ.ನಗರ, ಕೌಲ್ ಪೇಟೆ, ಚಿತ್ತವಾಡ್ಗಿ, ವಿಜಯನಗರ ಕಾಲೇಜಿನಲ್ಲಿ ವಸ್ತುಗಳನ್ನು ಹಾಗೂ ಬಟ್ಟೆಗಳನ್ನು ಬಿಸಾಡುವ ಪ್ರಕರಣಗಳು ಕಂಡು ಬಂದಿವೆ ಎಂದು ಖುದ್ದು ಪೌರಾಯುಕ್ತೆ ಜಯಲಕ್ಷ್ಮಿ ಅವರು ಹೇಳಿಕೊಂಡಿದ್ದರು. ಆದರೆ, ಇಲ್ಲಿವರೆಗೂ ಪರಿಣಾಮಕಾರಿ ಕ್ರಮಗೊಳ್ಳದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.
ನಗರದಲ್ಲಿ ಈ ಮುಂಚೆ ಒಳಚರಂಡಿ(ಯುಜಿಡಿ) ಓವರ್ ಫ್ಲೋ ಪ್ರಕರಣಗಳು ಕಂಡು ಬಂದಿದ್ದವು. ಆದರೆ, ಮನೆ ಮಾಲೀಕರ ವಿರುದ್ಧ ಮಾಧ್ಯಮದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಭಿತ್ತರಿಸಿದಾಗ ಜನರು ಜಾಗೃತಗೊಂಡಿದ್ದಾರೆ ಎಂದು ಪೌರಾಯುಕ್ತೆ ಜಯಲಕ್ಷ್ಮಿ ಅವರು ಹೇಳುತ್ತಿದ್ದಾರೆ.