ಹೊಸಪೇಟೆ:ತಾಲೂಕು ಕುರುಬರ ಸಂಘದ ವತಿಯಿಂದ ಇಂದು ಸಮುದಾಯದ ನಾನಾ ರಂಗಗಳಲ್ಲಿ ಕೆಲಸ ಮಾಡಿದ 12 ಗಣ್ಯ ವ್ಯಕ್ತಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು.
ಈ ವೇಳೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಮಾತನಾಡಿ, ಸಮುದಾಯದ ಏಳಿಗೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಅಲ್ಲದೇ ಸಮಾಜ ಸೇವೆಯನ್ನು ಮಾಡುವಂತವರನ್ನು ಗುರುತಿಸಿ ಮುಖ್ಯ ವೇದಿಕೆ ತರುವಂತ ಕೆಲಸ ಮಾಡಬೇಕು. ಸಮುದಾಯದ ಬೆನ್ನುಲುವಾಗಿ ಸದಾ ಇರುತ್ತೇನೆ ಎಂದು ಹೇಳಿದರು.