ಕರ್ನಾಟಕ

karnataka

ETV Bharat / state

ಪಿಂಚಣಿ, ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಹೊನ್ನೂರಪ್ಪ ಅಧಿಕಾರ ಸ್ವೀಕಾರ - ಬಳ್ಳಾರಿ ಸುದ್ದಿ

ಈ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದ ಟಿ.ಹೊನ್ನೂರಪ್ಪ ಮತ್ತು ವರ್ಗಾವಣೆಯಾದ ಮಲ್ಲಯ್ಯ ಹಿರೇಮಠ ಅವರನ್ನು ಕಚೇರಿಯ ಸಿಬ್ಬಂದಿ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿದರು..

Honnurappa
ಹೊನ್ನೂರಪ್ಪ

By

Published : Sep 8, 2020, 5:37 PM IST

ಬಳ್ಳಾರಿ :ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಟಿ. ಹೊನ್ನೂರಪ್ಪ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಯ್ಯ ಹಿರೇಮಠ ಅವರು ಟಿ.ಹೊನ್ನೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಸಹಾಯಕ ನಿರ್ದೇಶಕ ಹೊನ್ನೂರಪ್ಪ ಅವರು ಈ ಮೊದಲು ಕೊಪ್ಪಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಈ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದ ಟಿ.ಹೊನ್ನೂರಪ್ಪ ಮತ್ತು ವರ್ಗಾವಣೆಯಾದ ಮಲ್ಲಯ್ಯ ಹಿರೇಮಠ ಅವರನ್ನು ಕಚೇರಿಯ ಸಿಬ್ಬಂದಿ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿದರು. ಉಭಯ ಅಧಿಕಾರಿಗಳು ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ ಕೆ ರಾಮಲಿಂಗಪ್ಪ, ಅಭಿವೃದ್ಧಿ ಅಧಿಕಾರಿಗಳಾದ ಸುಧೀಶ್, ಗುರುಲಿಂಗಪ್ಪ, ಎನ್.ರತ್ನಾ, ಸಿಬ್ಬಂದಿ ಸುಮಂಗಳಾ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details