ಕರ್ನಾಟಕ

karnataka

ETV Bharat / state

ಕೊರೊನಾ ತಡೆಗೆ ಬಳ್ಳಾರಿಯಲ್ಲಿ ಮನೆ ಮನೆ ಸರ್ವೇ: ಡಿಹೆಚ್​​ಒ - ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸರ್ವೇ ಮಾಡಲಾಗುತ್ತಿದೆ. ಹೆಚ್ಚಿನ ಸೋಂಕಿತರು ಹೋಂ ಐಸೋಲೇಷನ್​ನಲ್ಲಿರಲು ಇಷ್ಟಪಡುತ್ತಿದ್ದಾರೆ ಎಂದು ಬಳ್ಳಾರಿ ಡಿಹೆಚ್​ಒ ಡಾ. ಹೆಚ್.ಎಲ್.ಜನಾರ್ದನ ಹೇಳಿದ್ದಾರೆ.

sdd
ಕೊರೊನಾ ತಡೆಗೆ ಬಳ್ಳಾರಿಯಲ್ಲಿ ಮನೆ ಮನೆ ಸರ್ವೇ: ಡಿಎಚ್​ಓ ಜನಾರ್ದನ

By

Published : Jul 30, 2020, 4:58 PM IST

ಬಳ್ಳಾರಿ: ಕಳೆದ ಎರಡು ದಿನಗಳಿಂದ ನಗರದಲ್ಲಿ ಮನೆ ಮನೆ ಸರ್ವೇ ಕಾರ್ಯಾರಂಭವಾಗಿದ್ದು, ಅಂದಾಜು 20 ಮಂದಿಗೆ ಆಕ್ಸಿಜನ್ ಸ್ಯಾಚುರೇಷನ್ ಕಮ್ಮಿ ಇರೋದು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿ ಡಾ. ಹೆಚ್.ಎಲ್.ಜನಾರ್ದನ ಹೇಳಿದ್ದಾರೆ.

ಕೊರೊನಾ ತಡೆಗೆ ಬಳ್ಳಾರಿಯಲ್ಲಿ ಮನೆ ಮನೆ ಸರ್ವೇ: ಡಿಹೆಚ್​ಒ ಜನಾರ್ದನ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಪೇಟೆ ಮತ್ತು ಸಂಡೂರು ತಾಲೂಕಿನಲ್ಲಿ ಮನೆ ಮನೆಯ ಮರು ಸರ್ವೇ ಕಾರ್ಯಾರಂಭವಾಗಿದೆ. ಶೇ. 95ಕ್ಕಿಂತಲೂ ಕಡಿಮೆ ಆಕ್ಸಿಜನ್ ಸ್ಯಾಚುರೇಷನ್ ಇರುವವರು ಈವರೆಗೆ 20 ಮಂದಿ ಕಂಡು ಬಂದಿದ್ದಾರೆ. ಅವರನ್ನು ನಿನ್ನೆ ಕೋವಿಡ್ ಟೆಸ್ಟ್​ಗೆ ಒಳಪಡಿಸಲಾಗಿದ್ದು, ವರದಿ ಬರಬೇಕಿದೆ. ಕೋವಿಡ್ ಪಾಸಿಟಿವ್ ಬಂದವರೆಲ್ಲರೂ ಕೂಡ ಹೋಂ ಐಸೋಲೇಷನ್​ನಲ್ಲಿರಲು ಇಷ್ಟಪಡುತ್ತಿದ್ದಾರೆ. ಹೀಗಾಗಿ 726 ಮಂದಿ ಹೋಂ ಐಸೋಲೇಷನ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಪೈಕಿ 166 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಇನ್ನೂ 529 ಮಂದಿ ಹೋಂ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೋಂ ಐಸೋಲೇಷನ್​ನಲ್ಲಿರುವ ಕೋವಿಡ್ ಸೋಂಕಿತರ ಚಿಕಿತ್ಸೆಗೆಂದು ಆರ್​ಆರ್​ ಟೀಂ ನೇಮಿಸಲಾಗಿದೆ. ಸಮುದಾಯದ ಕ್ವಾರಂಟೈನ್ ಕೇಂದ್ರಗಳಲ್ಲಿ ಅಂದಾಜು 329 ಮಂದಿ ಕೋವಿಡ್ ಸೋಂಕಿತರಿದ್ದಾರೆ. ಅಂದಾಜು 1000 ಕೋವಿಡ್ ಸೋಂಕಿತರನ್ನು ಇಡುವ ಸಾಮರ್ಥ್ಯ ಈ ಸಮುದಾಯ ಕ್ವಾರಂಟೈನ್ ಕೇಂದ್ರಗಳು ಹೊಂದಿವೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details