ಕರ್ನಾಟಕ

karnataka

ETV Bharat / state

ಹೊಸಪೇಟೆ: ಹುಲಿ, ಸಿಂಹ ಹಾಗೂ ಜಿಂಕೆಗೆ ಹೋಲ್ಡಿಂಗ್ ರೂಮ್

ಹೋಲ್ಡಿಂಗ್ ರೂಮ್​ಗಳನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ. ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಟೆಂಡರ್ ಕರೆಯುವ ಹಂತದಲ್ಲಿದೆ. ಹೋಲ್ಡಿಂಗ್ ರೂಮ್​ಗಳನ್ನು ಮಾಡುವುದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ

zoo
zoo

By

Published : Oct 21, 2020, 7:14 PM IST

ಹೊಸಪೇಟೆ (ಬಳ್ಳಾರಿ): ತಾಲೂಕಿನ ಕಮಲಾಪುರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್‌‌ ಪಾರ್ಕ್​ನಲ್ಲಿ ಹುಲಿ, ಸಿಂಹ ಹಾಗೂ ಜಿಂಕೆಗೆ ಹೋಲ್ಡಿಂಗ್ ರೂಮ್​ಗಳನ್ನು ಮಾಡಲಾಗುತ್ತದೆ. ‌ಈ ಮುಂಚೆ ಈ ಪ್ರಾಣಿಗಳನ್ನು ವೀಕ್ಷಣೆ ಮಾಡಬೇಕಾದರೆ ಸಫಾರಿಗೆ ತೆರಳಬೇಕಾಗಿತ್ತು. ಆದರೆ, ಈಗ ಇತರ ಪ್ರಾಣಿಗಳೊಂದಿಗೆ ಸಿಂಹ, ಹುಲಿ, ಜಿಂಕೆಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ.

ಹೋಲ್ಡಿಂಗ್ ರೂಮ್​ಗಳನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ. ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಟೆಂಡರ್ ಕರೆಯುವ ಹಂತದಲ್ಲಿದೆ. ಹೋಲ್ಡಿಂಗ್ ರೂಮ್​ಗಳನ್ನು ಮಾಡುವುದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗಿದೆ.

ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್​‌ ಪಾರ್ಕ್

ಹುಲಿ, ಸಿಂಹ ಹಾಗೂ ಜಿಂಕೆಯನ್ನು ಸಫಾರಿ ಮೂಲಕ ನೋಡಲು ಹಾಗೂ ಮೃಗಾಲಯ ನೋಡಲು ವಯಸ್ಕರೊಬ್ಬರು 150 ರೂ. ನೀಡಬೇಕಾಗುತ್ತದೆ. 5 ರಿಂದ 12 ವರ್ಷದ ಒಳಗಿನ ಮಕ್ಕಳು 75 ರೂ. ನೀಡಬೇಕಾಗುತ್ತದೆ. ಆದರೆ ಈಗ ಸಿಂಹ, ಜಿಂಕೆ, ಹುಲಿ ಪ್ರಾಣಿಗಳಿಗೆ ಹೋಲ್ಡಿಂಗ್ ರೂಮ್​ಗಳನ್ನು ಮಾಡುವುದರಿಂದ ಸಫಾರಿಗೆ ತೆರಳುವ ಅವಶ್ಯಕತೆ ಇಲ್ಲ. ಮೃಗಾಲಯದಲ್ಲೇ ನೋಡಬಹುದು.

ಇದರಿಂದ ಸಾಮಾನ್ಯ ಜನರ ದುಡ್ಡು ಉಳಿತಾಯವಾಗಲಿದೆ. ಅಲ್ಲದೇ, ಸಫಾರಿಗೆ ತೆರಳಲು ಸಮಯಬೇಕಾಗುತ್ತದೆ. ಮೃಗಾಲಯದಲ್ಲಿ ಕಡಿಮೆ ಸಮಯದಲ್ಲಿ ಸಿಂಹ, ಹುಲಿ ಹಾಗೂ ಜಿಂಕೆ ನೋಡಬಹುದಾಗಿದೆ.

ಅಟಲ್ ಬಿಹಾರಿ ವಾಜಪೇಯಿ ಜಿಯಾಜಿಕಲ್‌‌ ಪಾರ್ಕ್

ಪ್ರಾಣಿಗಳ ಸಂಖ್ಯೆ ಎಷ್ಟಿವೆ?:

ಸಿಂಹ-04, ಹುಲಿ-05, ಚಿರತೆ-08, ಕರಡಿ-04, ತೊಳ-06, ಮೊಸಳೆ-10, ಚಿಕ್ಕೆ ಜಿಂಕೆ-78, ಕೃಷ್ಣಮೃಗ-55, ಸಾರಂಗ-04 ಇವೆ. ಅಲ್ಲದೇ, ಎಮು, ಕೆಂಪು ಮುಖದ ಕೋತಿ, ಹನುಮಾನ ಲಂಗುರ, ಗುಳ್ಳೆ ನರಿ, ಕತ್ತೆ ಕಿರುಬ, ಸಿಲ್ವರ್ ಸಜೇಂಟ್, ಗೋಲ್ಡನ್ ಸಜೆಂಟ್, ಆಮೆ, ನಕ್ಷತ್ರ ಆಮೆ, ಕೆಂಪು ಕಿವಿ ಆಮೆ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಮೃಗಾಲಯದಲ್ಲಿ ಕಾಣ ಬಹುದಾಗಿದೆ.

ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್‌‌ ಪಾರ್ಕ್

ಪುನರ್ವಸತಿ ಕೇಂದ್ರಕ್ಕೆ ಪ್ರಸಕ್ತ ಸ್ಥಳ:

ಹೊಸಪೇಟೆಯು ಸುತ್ತಮುತ್ತಲಿನ ಅರಣ್ಯ ಪ್ರದೇಶ ಕರಡಿ, ತೋಳ ಹಾಗೂ ಚಿರತೆಗಳಿಂದ ಕೂಡಿದೆ. ವನ್ಯ ಜೀವಿಗಳ ಸಂರಕ್ಷಣೆಗಾಗಿ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಬಹುದಾಗಿದೆ. ಇದರಿಂದ ಮುಂದಿನ ಪೀಳಿಗಿಗೆ ಪ್ರಾಣಿಗಳನ್ನು ತೋರಿಸಬಹುದಾಗಿದೆ‌‌.

ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್‌‌ ಪಾರ್ಕ್

ನೀರಿನ ಸಂರಕ್ಷಣೆ:

ಅಟಲ್ ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್​ನಲ್ಲಿ ನೀರು ಸಂರಕ್ಷಣೆ ಮಾಡಲಾಗುತ್ತಿದೆ. 103 ಕಲ್ವರ್ಟ್, 5 ಕರೆಗಳು ಹಾಗೂ 5 ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಮಾತನಾಡಿ, ಜಿಂಕೆ, ಹುಲಿ, ಸಿಂಹಗಳ ಹೋಲ್ಡಿಂಗ್ ರೂಮ್​ಗಳನ್ನು ಮಾಡುವುದರಿಂದ ಬಡ ಜನರರಿಗೆ ಕಡಿಮೆ ಹಣದಲ್ಲಿ ಪ್ರಾಣಿಗಳನ್ನು ನೋಡಬಹುದಾಗಿದೆ. ಅಲ್ಲದೇ, ಕಡಿಮೆ ಸಮಯದಲ್ಲಿ ಇತರ ಪ್ರಾಣಿಗಳನ್ನೂ ವೀಕ್ಷಣೆ ಮಾಡಬಹುದು. ಹೋಲ್ಡಿಂಗ್ ರೂಮ್ ನಿರ್ಮಾಣ ಟೆಂಡರ್ ಹಂತದಲ್ಲಿದೆ. ಒಂದು ಕೋಟಿ ರೂ.ವೆಚ್ಚದಲ್ಲಿ ಹೋಲ್ಡಿಂಗ್ ರೂಮ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.‌

ABOUT THE AUTHOR

...view details