ಬಳ್ಳಾರಿ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮಾಜಿ ಸಚಿವ ಹೆಚ್.ಎಂ. ರೇವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ರಾಜ್ಯ ಸರ್ಕಾರ ಅತ್ಯಂತ ತರಾತುರಿಯಲ್ಲಿ ಸ್ಥಾಪನೆ ಮಾಡಿದೆ ಎಂದಿದ್ದಾರೆ.
ಅದಕ್ಕೆ ಶಾಶ್ವತ ಹಿಂದುಳಿದ ಆಯೋಗದಿಂದ ಸರ್ವೇಕಾರ್ಯ ಮಾಡಬೇಕಿತ್ತು. ಆ ಸಮುದಾಯದಲ್ಲಿ ಎಷ್ಟು ಮಂದಿ ಬಡವರಿದ್ದಾರೆಂಬ ಮಾಹಿತಿ ಕೂಡ ಇರಬೇಕಿತ್ತಾದರೂ ಅದನ್ನು ಮಾಡದೇ ತರಾತುರಿಯಲ್ಲಿ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡೋದು ತರವಲ್ಲ. ನಾನು ಮಾತನಾಡಿದರೆ ರಾಜಕೀಯ ಅಂತಾರೆ. ಹೀಗಾಗಿ, ಕುರುಬ ಸಮುದಾಯಕ್ಕೂ ಎಸ್ಟಿ ಮೀಸಲಾತಿ ಕೇಳೋದು ಕೂಡ ರಾಜಕೀಯ ಪ್ರೇರಿತ ಅಂತಾರೆ ಅನ್ನಲಿ ಬಿಡಿ. ಅದಕ್ಕೆ ನಾನೇನು ಮಾಡೋದಕ್ಕೆ ಬರೋದಿಲ್ಲ ಎಂದು ರೇವಣ್ಣ ಅಭಿಪ್ರಾಯಪಟ್ಟಿದ್ದಾರೆ.