ಕರ್ನಾಟಕ

karnataka

ETV Bharat / state

ಹೊಸಪೇಟೆ: ವಿಜಯನಗರದ ಐತಿಹಾಸಿಕ ಕಾಲುವೆ ನಿರ್ಲಕ್ಷ್ಯ!

ವಿಜಯನಗರ ಕಾಲದಲ್ಲಿ ಹೊಸಪೇಟೆ ಮಧ್ಯಭಾಗದಲ್ಲಿ ಬಸವಣ್ಣ ಕಾಲುವೆ ನಿರ್ಮಾಣ ಮಾಡಲಾಗಿತ್ತು. ತುಂಗಭದ್ರಾ ನದಿಗೆ ಕಟ್ಟಿದ್ದ ಅಣೆಕಟ್ಟೆಯಿಂದ ಕಾಲುವೆಗಳ ಮೂಲಕ ಕೃಷಿಗೆ ನೀರು ಒದಗಿಸಲಾಗುತ್ತಿತ್ತು. ಸುಮಾರು 10 ಕಿ.ಮೀ. ಉದ್ದದ ಕಾಲುವೆ ಇದಾಗಿದ್ದು, ಈ ಕಾಲುವೆಯು ಸಾವಿರಾರು ಎಕರೆ ಭೂಮಿಗೆ ನೀರುಣಿಸುತ್ತಿದೆ.

Historic canal of Vijayanagar
ಅಧಿಕಾರಿಗಳ ನಿರ್ಲಕ್ಷಕ್ಕೆ ಒಳಗಾದ ವಿಜಯನಗರದ ಐತಿಹಾಸಿಕ ಕಾಲುವೆ

By

Published : Sep 10, 2020, 7:46 PM IST

ಹೊಸಪೇಟೆ: ವಿಜಯನಗರ ಕಾಲದ ಐತಿಹಾಸಿಕ ಕಾಲುವೆಯೊಂದು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಗಳ ಗೂಡಾಗಿದೆ. ಕೃಷಿ ಉದ್ದೇಶಕ್ಕಾಗಿ ನಿರ್ಮಿಸಿದ ಕಾಲುವೆ ನಿರ್ವಹಣೆ ಇಲ್ಲದೇ ಸೊರಗಿದೆ.

ವಿಜಯನಗರ ಕಾಲದಲ್ಲಿ ಹೊಸಪೇಟೆ ಮಧ್ಯಭಾಗದಲ್ಲಿ ಬಸವಣ್ಣ ಕಾಲುವೆಯನ್ನು ನಿರ್ಮಾಣ ಮಾಡಲಾಗಿತ್ತು. ತುಂಗಭದ್ರಾ ನದಿಗೆ ಕಟ್ಟಿದ್ದ ಅಣೆಕಟ್ಟೆಯಿಂದ ಕಾಲುವೆಗಳ ಮೂಲಕ ಕೃಷಿಗೆ ನೀರು ಒದಗಿಸಲಾಗುತ್ತಿತ್ತು. ಸುಮಾರು 10 ಕಿ.ಮೀ. ಉದ್ದದ ಕಾಲುವೆ ಇದಾಗಿದ್ದು, ಈ ಕಾಲುವೆಯು ಸಾವಿರಾರು ಎಕರೆ ಭೂಮಿ ನೀರುಣಿಸುತ್ತದೆ.

ಕಾಲುವೆಯಲ್ಲಿ ಕಸದ ರಾಶಿ:ಮೂರಂಗಡಿ ವೃತ್ತದ ಬಳಿ ಬರುವ ಕಾಲುವೆಯಲ್ಲಿ ಕಸದ ರಾಶಿ ತುಂಬಿಕೊಂಡಿದೆ. ‌ಬಾಟಲಿ, ಚಪ್ಪಳಿ, ಕಸ ಮತ್ತು ಕಡ್ಡಿಗಳು ಕಾಲುವೆಯನ್ನು ಆಕ್ರಮಿಸಿಕೊಂಡಿವೆ. ಇದರಿಂದ ನೀರು ಹೊರಗಡೆ ಬರುತ್ತಿದ್ದು, ರಸ್ತೆಯಲ್ಲಿ ಓಡಾಡುವಂತಹ ಜನರು ತೊಂದರೆ ಪಡುವಂತಾಗಿದೆ.‌

ಕಾಲುವೆ ಪಕ್ಕದಲ್ಲಿ ಕಸ: ಬಸವಣ್ಣ ಕಾಲುವೆ ಸುತ್ತಲಿನ ಜನರು ಕಸವನ್ನು ಕಾಲುವೆ ಪಕ್ಕ ಸುರಿಯುತ್ತಿದ್ದಾರೆ.‌ ಆ ಕಸ ಕಾಲುವೆ ಒಳಗಡೆ ಬೀಳುತ್ತಿದೆ. ಇದರಿಂದ ಕಾಲುವೆಯಲ್ಲಿ ಕಸದ ರಾಶಿ ತುಂಬಿಕೊಳ್ಳುತ್ತಿದೆ.‌ ಪರಿಣಾಮ ಸರಾಗವಾಗಿ ನೀರು ಹರಿಯಲು ತೊಡಕಾಗಿದೆ.

ವಿಜಯನಗರದ ಐತಿಹಾಸಿಕ ಕಾಲುವೆ ನಿರ್ಲಕ್ಷ್ಯ

ಸೋರುತ್ತಿದೆ ಕಾಲುವೆ:ನಗರದ ಮೂರಂಗಡಿ ವೃತ್ತದಲ್ಲಿರುವ ಬಸವ ಕಾಲುವೆಯು ಐದಾರು ಕಡೆ ಸೋರುತ್ತಿದೆ. ಇದರಿಂದ ಕಾಲುವೆಯ ನೀರು ಚರಂಡಿ ಪಾಲಾಗುತ್ತಿದೆ. ಬೆಳೆಗಳಿಗೆ ನೀರು ಇಲ್ಲ ಎಂದು ರೈತರು ಪರದಾಡುವಂತ ಸ್ಥಿತಿ ಇದ್ದು, ಅಧಿಕಾರಿಗಳ‌ ನಿರ್ಲಕ್ಷ್ಯದಿಂದ ಕಾಲುವೆ‌ಯ ನೀರು ಚರಂಡಿಗೆ ಹರಿಯುವಂತಾಗಿದೆ.

ಹದಗಟ್ಟೆ ರಸ್ತೆ ವ್ಯವಸ್ಥೆ:ಕಾಲುವೆ ಪಕ್ಕದಲ್ಲಿನ ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆ ಬಂದರೆ ಸಾಕು ಗುಂಡಿಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ. ಓಡಾಡುವರಿಗೆ ರಸ್ತೆ ಹಾಗೂ ಗುಂಡಿ ಯಾವುದು ಎಂದು ತಿಳಿಯದಂತಾಗಿದೆ. ಕೆಲ ವಾಹನ ಸವಾರರು ಬಿದ್ದಿರುವ ಉದಾಹರಣೆಗಳಿವೆ.‌ ಹೀಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಮುಂದಾಗುತ್ತಿಲ್ಲ.

ಅಧಿಕಾರಿಗಳ‌ ನಿಷ್ಕಾಳಜಿ:ಐತಿಹಾಸಿಕ ಕಾಲುವೆ ರಕ್ಷಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದಾಗಿ ಕಾಲುವೆ ಅಧೋಗತಿಗೆ ತಲುಪಿದೆ. ಕೂಡಲೇ ಕಾಲುವೆ ಸಂರಕ್ಷಣೆಗೆ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಈ ಕುರಿತು ಈಟಿವಿ ಭಾರತ ದೂರವಾಣಿ ಮೂಲಕ ಕಮಲಾಪುರಿನ ವಿಜಯನಗರ ಕಾಲುವೆ ಉಪವಿಭಾಗದ ನೀರಾವರಿ ಇಲಾಖೆಯ ಎಇಇ ತಿಮ್ಮಣ್ಣ ಅವರು ಮಾತನಾಡಿ, ಕಾಲುವೆಯಲ್ಲಿ ನೀರಿನ ಪ್ರಮಾಣ ತಗ್ಗಿದಾಗ ಸೋರುವುದನ್ನು ಸರಿಪಡಿಸಲಾಗುವುದು. ಕಾಲುವೆಯಲ್ಲಿ ಕಸದ ನಿರ್ವಹಣೆ ನಗರಸಭೆ ವ್ಯಾಪ್ತಿಗೆ ಬರುತ್ತದೆ. ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದರು.

ABOUT THE AUTHOR

...view details