ಬಳ್ಳಾರಿ :ವಿವಿಧ ಸಂಘಟನೆಗಳ ಮುಖಂಡರು ನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಸಿ, ನಾಳಿನ ಕರ್ನಾಟಕ ಬಂದ್ಗೆ ಬೆಂಬಲಿಸುವಂತೆ ಮನವಿ ಮಾಡಿದರು.
ನಾಳಿನ ಕರ್ನಾಟಕ ಬಂದ್ಗೆ ಬೆಂಬಲಿಸುವಂತೆ ಕೋರಿ ಪಾದಯಾತ್ರೆ - Bellary Hiking news
ರೈತ ವಿರೋಧಿ ಕಾಯ್ದೆ ವಿರೋಧಿಸಿ ಸೋಮವಾರ ಕರ್ನಾಟಕ ಬಂದ್ ಮಾಡಲಾಗುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದ್ದು, ನಾಳೆ ಅಂಗಡಿ-ಮಳಿಗೆಗಳನ್ನು ತೆರೆಯಬಾರದೆಂದು ಮನವಿ..

ನಾಳಿನ ಕರ್ನಾಟಕ ಬಂದ್ಗೆ ಬೆಂಬಲಿಸುವಂತೆ ಕೋರಿ ಪಾದಯಾತ್ರೆ
ನಾಳಿನ ಕರ್ನಾಟಕ ಬಂದ್ಗೆ ಬೆಂಬಲಿಸುವಂತೆ ಕೋರಿ ಪಾದಯಾತ್ರೆ
ನಗರದ ತೇರುಬೀದಿ, ಬ್ರಾಹ್ಮಣ ಬೀದಿ ರಸ್ತೆ, ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ವೃತ್ತದಲ್ಲಿ ಪಾದಯಾತ್ರೆ ನಡೆಸಿ, ರೈತ ವಿರೋಧಿ ಕಾಯ್ದೆ ವಿರೋಧಿಸಿ ಸೋಮವಾರ ಕರ್ನಾಟಕ ಬಂದ್ ಮಾಡಲಾಗುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದ್ದು, ನಾಳೆ ಅಂಗಡಿ-ಮಳಿಗೆಗಳನ್ನು ತೆರೆಯಬಾರದೆಂದು ಮನವಿ ಮಾಡಿದರು.
ಈ ವೇಳೆ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ, ರೈತ ಸಂಘದ ಸಂಗನಕಲ್ಲು ಕೃಷ್ಣ, ಗಂಗಾವತಿ ವೀರೇಶ್, ಜಾಲಿಹಾಲ್ ಶ್ರೀಧರ್, ಎಡ ಸಂಘಟನೆಗಳ ಮುಖಂಡರಾದ ಸತ್ಯಬಾಬು, ಶಿವಶಂಕರ್, ಹನುಮಂತಪ್ಪ, ಗುರುಸಿದ್ದಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.