ಬಳ್ಳಾರಿ:ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಪೊಲೀಸರಿಂದ ಅಕ್ಟೋಬರ್ 11ರಂದು ಹೆಲ್ಮೆಟ್ ಜಾಗೃತಿ ಜಾಥಾ ನಡೆಯಿತು.
ಕೂಡ್ಲಿಗಿ ಪಟ್ಟಣದಲ್ಲಿ ಹೆಲ್ಮೆಟ್ ಜಾಗೃತಿ ಜಾಥಾ - Helmet Awareness Jata in the town of Koodligi
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಲ್ಮೆಟ್ ಜಾಗೃತಿ ಜಾಥಾ ನಡೆಸಲಾಯಿತು.
ಪಟ್ಟಣದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಪೊಲೀಸರು ಬೈಕ್ ಜಾಥಾದ ಮೂಲಕ ಪಟ್ಟಣದ ನಾಗರಿಕರಲ್ಲಿ ಹೆಲ್ಮೆಟ್ ಜಾಗೃತಿ ಮೂಡಿಸಿದರು.
ಈ ಸಮಯದಲ್ಲಿ ಸಿಪಿಐ ಪಂಪನಗೌಡ ಮಾತನಾಡಿ, ರಸ್ತೆ ಸಂಚಾರಿ ನಿಯಮಗಳನ್ನು ಹಾಗೂ ಕೋವಿಡ್ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಅದರಿಂದಾಗಿ ವೈಯಕ್ತಿಕ ಮತ್ತು ಕೌಟುಂಬಿಕ ಸುರಕ್ಷತೆಗೆ ಕಾರಣವಾಗಲಿದೆ. ಹೆಲ್ಮೆಟ್ ಹಾಗೂ ಮಾಸ್ಕ್ ಖಡ್ಡಾಯವಾಗಿಸಿ ಸಕಾ೯ರ ಕಾನೂನು ಜಾರಿ ತಂದಿದೆ. ಸಕಾ೯ರದ ಸಂಚಾರಿ ನಿಯಮಗಳು ಕಾನೂನು ಮಾತ್ರವಲ್ಲ ಅವು ನಮ್ಮೆಲ್ಲರ ರಕ್ಷಾ ಕವಚದಂತೆ ಪರಿಣಾಮಕಾರಿಯಾಗಿವೆ ಎಂದರು.