ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಕೃಷ್ಣಾ ನಗರದಲ್ಲಿ ವರುಣನ ಆರ್ಭಟಕ್ಕೆ 2.5 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ನೆಲಸಮವಾಗಿದೆ.
ಭಾರೀ ಮಳೆಗೆ ನೆಲಕಚ್ಚಿದ ಬೆಳೆ: ಬಳ್ಳಾರಿಯಲ್ಲಿ ರೈತ ಕಂಗಾಲು
ಭಾರೀ ಮಳೆಯಿಂದ ಬೆಳೆ ನೆಲಕಚ್ಚಿ ರೈತ ಕಂಗಾಲಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕೃಷ್ಣಾ ನಗರದಲ್ಲಿ ನಡೆದಿದೆ.
ಭಾರಿ ಮಳೆಗೆ ನೆಲಕಚ್ಚಿದ ಬೆಳೆ
ಗ್ರಾಮದ ರೈತ ಚಂದ್ರಶೇಖರ ಅರಕೇರಿ ಎಂಬುವರಿಗೆ ಸೇರಿದ ಬೆಳೆ ನಾಶವಾಗಿ ಕಂಗಲಾಗಿದ್ದಾರೆ. ಬೆಳೆ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡಲಾಗಿದ್ದು, ಸದ್ಯ ರೈತನಿಗೆ ಸಂಕಷ್ಟ ಎದುರಾಗಿದೆ.
ಸಂಡೂರು ಪಟ್ಟಣದ ಸುತ್ತ ಸುಮಾರು 66 ಎಂಎಂ ಮಳೆಯಾಗಿದ್ದು, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.