ಬಳ್ಳಾರಿ: ಬಿರು ಬಿಸಿಲಿಗೆ ಹೆಸರುವಾಸಿಯಾದ ಬಳ್ಳಾರಿ ಜಿಲ್ಲೆ ಕಳೆದ ಮೂರ್ನಾಲ್ಕು ದಿನಗಳಿಂದ ಮಲೆನಾಡಿನಂತೆ ಕಂಗೊಳಿಸುತ್ತಿದೆ.
ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಕರಿಮೋಡಗಳ ಚೆಲ್ಲಾಟ ಜೋರಾಗಿದೆ. ಬೆಟ್ಟ, ಗುಡ್ಡಗಳಲ್ಲಿ ಗಣಿಧೂಳಿಗೆ ಬದಲಾಗಿ ಹಚ್ಚ ಹಸಿರಿನ ಚಿಗುರು ಮೂಡುತ್ತಿದೆ.

ಈ ಬಾರಿ ಜಿಲ್ಲೆಯಲ್ಲಿ ರೈತಾಪಿ ವರ್ಗದ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗುವ ಸಂಶಯವಿತ್ತು. ಆದರೆ, ಜಲಾನಯನ ಪ್ರದೇಶಗಳಲ್ಲಾದ ಮಳೆಯಿಂದ, ಜಲಾಶಯದೊಡಲು ತುಂಬುತ್ತಿದೆ.
ಭಾರಿ ಮಳೆಯಿಂದಾಗಿ ಇಲ್ಲಿನ ಕುಡಿತಿನಿ ಬಳಿ ಇರುವ ದರೋಜಿ ಕೆರೆ ಕೂಡ ಬಹುತೇಕ ಭರ್ತಿಯಾಗಿದೆ.