ಬಳ್ಳಾರಿ:ಹೂವಿನ ಹಡಗಲಿ ತಾಲೂಕಿನಾದ್ಯಂತ ಸುರಿದ ಮಹಾಮಳೆ ಪರಿಣಾಮ ಪ್ರವಾಹ ಭೀತಿ ಎದುರಾಗಿದೆ. ಹಿರೇಕೊಳಚೆ ಗ್ರಾಮದ ಅಂದಾಜು 50ಕ್ಕೂ ಹೆಚ್ಚು ಮನೆಗಳು ಮಳೆನೀರಿನಿಂದ ಜಲಾವೃತವಾಗಿವೆ.
ಹಿರೇಕೊಳಚೆಯಲ್ಲಿ ವರುಣಾರ್ಭಟ: 50 ಮನೆಗಳು ಜಲಾವೃತ - ಹೂವಿನ ಹಡಗಲಿ ಭೀಕರ ಮಳೆ
ಹೂವಿನ ಹಡಗಲಿ ತಾಲೂಕಿನಾದ್ಯಂತ ಜೋರು ಮಳೆ ಸುರಿದಿದ್ದು, ಹಿರೇಕೊಳಚೆ ಗ್ರಾಮದಲ್ಲಿನ 50ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ಜಲಾವೃತಗೊಂಡ ಮನೆಗಳು
ಎಲ್ಲೆಡೆ ನೀರು.. ಜಲಾವೃತಗೊಂಡ ಮನೆಗಳು
ಹಿರೇಕೊಳಚೆಯಲ್ಲಿನ ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಕಳೆದ ಇಪ್ಪತ್ತು ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದ ನೀರು ಹರಿದು ಬಂದಿರೋದನ್ನು ಕಂಡಿರಲಿಲ್ಲ ಎಂದು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ರು.
ಚಿಕ್ಕ ಕೊಳಚೆ, ಹಿರೇಕೊಳಚೆ ಎಂಬೆರಡು ಅವಳಿ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ರೈತರು ಸಂಗ್ರಹಿಸಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಬೆಳೆಗಳ ರಾಶಿ ನೀರಿಗೆ ಆಹುತಿಯಾಗಿದೆ.