ಬಳ್ಳಾರಿ:ದೀಪಾವಳಿ ಅಮಾವಾಸ್ಯೆ ದಿನವಾದ ಸೋಮವಾರದಂದು ಬೆಳಗಿನಜಾವ ಸತತ ನಾಲ್ಕು ಗಂಟೆಗಳ ಕಾಲ ಸುರಿದ ಮಹಾಮಳೆಗೆ ಗಣಿನಾಡು ಬಳ್ಳಾರಿ ಜಿಲ್ಲೆಯ ತತ್ತರಿಸಿದೆ.
ಮಹಾಮಳೆಗೆ ಗಣಿನಾಡು ತತ್ತರ: ನಾನಾ ಗ್ರಾಮಗಳಲ್ಲಿ ದೀಪಾವಳಿ ಆಚರಣೆ ಇಲ್ಲ!
ಬಳ್ಳಾರಿ ತಾಲೂಕಿನ ಬಹುತೇಕ ಗ್ರಾಮಗಳು ಈ ಮಳೆ ನೀರಿನಿಂದ ಜಲಾವೃತಗೊಂಡಿವೆ. ದೀಪಾವಳಿ ಸಂಭ್ರಮದಲ್ಲಿದ್ದ ಗ್ರಾಮಸ್ಥರಿಗೆ ಈ ಮಳೆ ನೀರು ಅಡ್ಡಿ ಉಂಟು ಮಾಡಿತು.
ಬಳ್ಳಾರಿ ತಾಲೂಕಿನ ಚರಕುಂಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲ್ಸೆತುವೆಯು ಸಂಪೂರ್ಣವಾಗಿ ಮಳೆ ನೀರಿನಿಂದ ಜಲಾವೃತಗೊಂಡಿದ್ದು, ರಸ್ತೆಯುದ್ಧಕ್ಕೂ ಅಳವಡಿಸಲಾಗಿದ್ದ ಈ ವಿದ್ಯುತ್ ಕಂಭಗಳು ಒಂದುಕಡೆವಾಲಿದ್ದು, ಭೋರ್ಗರೆವ ಮಳೆಯ ನೀರಿನಿಂದ ಯಾವ ಸಂದರ್ಭದಲ್ಲಾದ್ರೂ ಧರೆಗೆ ಉರುವ ಸಾಧ್ಯತೆ ಹೆಚ್ಚಿದೆ. ಇನ್ನು ಚರಕುಂಟೆ ಗ್ರಾಮಸ್ಥರು ಅತ್ತ ದೀಪಾವಳಿ ಹಬ್ಬದ ಆಚರಣೆಗೂ ಸಿದ್ಧರಾಗದೇ, ಕೃಷಿ ಚಟುವಟಿಕೆಯಲ್ಲೂ ತಟಸ್ಥರಾಗಿದ್ದಾರೆ.
ಅಲ್ಲದೇ, ಇಬ್ರಾಹಿಂಪುರ ಗ್ರಾಮದಲ್ಲಂತೂ ಈ ಮಹಾಮಳೆಯ ನೀರಿನಿಂದ ಇಡೀ ಗ್ರಾಮವೆಲ್ಲ ಜಲಾವೃತಗೊಂಡಿದೆ. ಗ್ರಾಮದ ರಾಜ ಬೀದಿ ಹಾಗೂ ಪ್ರಮುಖ ರಸ್ತೆಯಲೆಲ್ಲಾ ಈ ನೀರು ನುಗ್ಗಿದೆ. ಅದರಿಂದ ಗ್ರಾಮಸ್ಥರಿಗೆ ದೀಪಾವಳಿ ಹಬ್ಬವನ್ನು ಈ ಮಳೆಯ ನೀರಿನಲ್ಲೇ ಕಳೆಯುವಂತಾಗಿದೆ.