ಕರ್ನಾಟಕ

karnataka

ಮಳೆಗೆ ಗಣಿ ಜಿಲ್ಲೆಯ ಜನ ಹೈರಾಣ: ನೂರಾರು ಎಕರೆ ಬೆಳೆ ನಾಶ!

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬಳ್ಳಾರಿ ಜಿಲ್ಲೆಯ ಜನ ಹೈರಾಣಾಗಿದ್ದು, ನೂರಾರು ಎಕರೆಯಲ್ಲಿ ಬೆಳೆದಿದ್ದ ವಿವಿಧ ಬೆಳಗಳು ನಾಶವಾಗಿವೆ.

By

Published : Oct 19, 2019, 8:00 PM IST

Published : Oct 19, 2019, 8:00 PM IST

ನೂರಾರು ಎಕರೆ ಬೆಳೆ ನಾಶ

ಬಳ್ಳಾರಿ:ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಉಪನಾಯಕನಹಳ್ಳಿಯಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಇನ್ನಿತರ ಬೆಳೆಗಳು ಸಂಪೂರ್ಣ ಹಾಳಾಗಿವೆ.

ಭಾರಿ ಮಳೆಗೆ ಗಣಿ ಜಿಲ್ಲೆಯಲ್ಲಿ ನೂರಾರು ಎಕರೆ ಬೆಳೆ ನಾಶ

ಹಂಪಪಟ್ಟಣ ಮತ್ತು ಉಪನಾಯಕನಹಳ್ಳಿಯ ಸೇತುವೆ ಜಲಾವೃತಗೊಂಡಿದ್ದು, ಜನರು ಸೇತುವೆ ದಾಟುಲು ಹರಸಾಹಸ ಪಡುತ್ತಿದ್ದಾರೆ. ಹಗರಿಬೊಮ್ಮನಹಳ್ಳಿಯ ಕೆಲ ತಗ್ಗು ಪ್ರದೇಶದ ಕೆಲ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಬಳ್ಳಾರಿ ಜಿಲ್ಲೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 100.8 ಸೆಂ.ಮೀಟರ್ ನಷ್ಟು ಮಳೆ ಆಗಿದೆ. ಕೂಡ್ಲಿಗಿ 51.6, ಹೊಸಪೇಟೆ 23, ಬಳ್ಳಾರಿ 1.3, ಹಡಗಲಿ 29.6, ಸಂಡೂರು 1.3, ಸಿರುಗುಪ್ಪ 1.6, ಹರಪನಹಳ್ಳಿ 14.0 ಸೆಂ.ಮೀಟರ್​ನಷ್ಟು ಮಳೆಯಾಗಿದೆ. ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ABOUT THE AUTHOR

...view details