ಕರ್ನಾಟಕ

karnataka

ETV Bharat / state

ಸಿರಗುಪ್ಪ ತಾಲೂಕಿನಲ್ಲಿ ಭಾರೀ ಮಳೆ: ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಜಾನುವಾರುಗಳ ರಕ್ಷಣೆ - ಸಿರಗುಪ್ಪದಲ್ಲಿ ಕೊಚ್ಚಿ ಹೋಗುತ್ತಿದ್ದ ಜಾನುವಾರುಗಳ ರಕ್ಷಣೆ

ಬಳ್ಳಾರಿಯ ಸಿರಗುಪ್ಪ ತಾಲೂಕಿನ ಹೊಸಳ್ಳಿ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಜಾನುವಾರುಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

Heavy rain Siraguppa Thaluku of Bellary
ಕೊಚ್ಚಿ ಹೋಗುತ್ತಿದ್ದ ಜಾನುವಾರುಗಳನ್ನು ರಕ್ಷಿಸಿದ ಸ್ಥಳೀಯರು

By

Published : Sep 14, 2020, 2:27 PM IST

ಬಳ್ಳಾರಿ: ಜಿಲ್ಲಾದ್ಯಂತ ಸುರಿದ ಭಾರೀ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಿರುಗುಪ್ಪ ತಾಲೂಕಿನ ಹಾಗಲೂರು - ಹೊಸಳ್ಳಿ ಗ್ರಾಮದ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಜಾನುವಾರುಗಳನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಸಿರುಗುಪ್ಪ ತಾಲೂಕಿನ ಹಾಗಲೂರು - ಹೊಸಳ್ಳಿ, ರಾರಾವಿ, ಕರೂರು ಸೇರಿದಂತೆ ಬಹುತೇಕ ಹಳ್ಳ- ಕೊಳ್ಳಗಳು ತುಂಬಿದ್ದು, ಹೊಲ- ಗದ್ದೆಗಳಿಗೆ ನೀರು ನುಗ್ಗಿದೆ.

ಕೊಚ್ಚಿ ಹೋಗುತ್ತಿದ್ದ ಜಾನುವಾರುಗಳನ್ನು ರಕ್ಷಿಸಿದ ಸ್ಥಳೀಯರು

ಕಳೆದ ನಾಲ್ಕು ದಿನಗಳ ಹಿಂದಯಷ್ಟೇ ಸಿರುಗುಪ್ಪ ತಾಲೂಕಿನ ಹೆಚ್‌.ಹೊಸಳ್ಳಿ ಹಳ್ಳದಲ್ಲಿ ರುದ್ರಪ್ಪ ಎಂಬುವರಿಗೆ ಸೇರಿದ 7 ಜಾನುವಾರುಗಳು ಕೊಚ್ಚಿ ಹೋಗಿದ್ದವು.

ABOUT THE AUTHOR

...view details