ಬಳ್ಳಾರಿ: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಿನ್ನೆ ರಾತ್ರಿ ಸುರಿದ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ವರುಣನ ರಭಸಕ್ಕೆ ಮರ-ಗಿಡಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಲವಾರು ಮನೆಗಳ ಹಂಚು ಮತ್ತು ತಗಡು ಕಿತ್ತು ಹೋಗಿವೆ.
ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ವಡ್ಡರಬಂಡೆ, ಗಾಂಧಿನಗರ, ಮೀಲರ್‌ಪೇಟೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಚರಂಡಿ ತುಂಬಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಭಾರಿ ನಷ್ಟ ಉಂಟು ಮಾಡಿದೆ.
ಬಳ್ಳಾರಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ.. ದುರ್ಗಮ್ಮನ ದೇವಸ್ಥಾನ ಬಳಿ ಹಾಗೂ ಸತ್ಯನಾರಾಯಣ ಪೇಟೆಯ ಅಂಡರ್ ಪಾಸ್ಗೆ ಸಹ ನೀರು ನುಗ್ಗಿದ್ದು, ಸಂಚಾರ ಬಂದ್ ಆಗಿದೆ. ನಗರದ ಬಹುತೇಕ ಕಡೆ ರಸ್ತೆಗಳಲ್ಲಿ ನೀರು ತುಂಬಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಮಳೆ ಜೊತೆಗೆ ಬಿರುಗಾಳಿ ಬೀಸಿದ್ದರಿಂದ ಕೆಲವು ಏರಿಯಾಗಳಲ್ಲಿ ಮರಗಳು ನೆಲಕ್ಕುರುಳಿವೆ. ಬಹುತೇಕ ಕಡೆ ವಿದ್ಯುತ್ ಸರಬರಾಜು ಸ್ಥಗಿತವಾಗಿ ರಾತ್ರಿಯಿಡೀ ಜನರು ಕತ್ತಲಲ್ಲಿ ಜಾಗರಣೆ ಮಾಡಿದರು.
ಇದನ್ನೂ ಓದಿ:ಒಂದೆಡೆ ಗಣಿಗಾರಿಕೆ: ಮತ್ತೊಂದೆಡೆ ಕುಸಿದು ಬಿದ್ದ ಬೃಹತ್ ಗುಡ್ಡ.. ವಿಡಿಯೋ