ಬಳ್ಳಾರಿ: ಜಿಲ್ಲೆಯಾದ್ಯಂತ ನಿನ್ನೆಯಿಂದ ವರುಣನ ಅರ್ಭಟ ಜೋರಾಗಿದೆ. ಬಿಟ್ಟುಬಿಡದೆ ಸುರಿದ ಮಳೆ ಸಾರ್ವಜನಿಕ ಸಂಚಾರಕ್ಕೂ ಅಡ್ಡಿಯನ್ನುಂಟು ಮಾಡಿದ್ದಲ್ಲದೇ, ಜನಜೀವನ ಸಹ ಅಸ್ತವ್ಯಸ್ತವಾಗಿದೆ. ನಿನ್ನೆ ಸಂಜೆಹೊತ್ತಿಗೆ ಆರಂಭವಾದ ಮಳೆಯು ಇಂದು ಬೆಳಗ್ಗೆಯೂ ಮುಂದುವರೆದಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಧಾರಾಕಾರ ಮಳೆ: ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿದ ಪಿಎಸ್ಐ - ballary latest news
ಜಿಲ್ಲೆಯಲ್ಲಿ ನಿನ್ನೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕುಡಿತಿನಿ ಪಿಎಸ್ಐ ಮಹಮ್ಮದ್ ರಫಿ ಅವರು ಸ್ವತಃ ತಾವೇ ರಸ್ತೆಗಿಳಿದು ಸವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿದ್ದಾರೆ.
ಗಣಿಜಿಲ್ಲೆಯಲ್ಲಿ ಧಾರಾಕಾರ ಮಳೆ; ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿದ ಪಿಎಸ್ಐ
ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿದ ಪಿಎಸ್ಐ: ಸುರಿದ ಭಾರೀ ಮಳೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕುಡಿತಿನಿ ಪಿಎಸ್ಐ ಮಹಮ್ಮದ್ ರಫಿ ಅವರು ಸ್ವತಃ ತಾವೇ ರಸ್ತೆಗಿಳಿದು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ಈ ಟ್ರಾಫಿಕ್ ಉಂಟಾಗಿರೋದನ್ನು ಸೂಕ್ಷ್ಮವಾಗಿ ಗಮನಿಸಿದ ಪಿಎಸ್ಐ ಮಹಮ್ಮದ್ ರಫಿ ಅವರು ರಸ್ತೆಗಿಳಿದು ಎರಡೂ ಬದಿಯಲ್ಲಿ ಸರಾಗವಾಗಿ ವಾಹನಗಳು ಸಂಚರಿಸಲು ಅನುವು ಮಾಡಿಕೊಡಿಕೊಟ್ಟಿದ್ದಾರೆ.