ಬಳ್ಳಾರಿ:ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಮುಖ್ಯ ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಜನ ಜೀವನಕ್ಕೆ ತೊಂದರೆಯಾಗಿತ್ತು.
ಗಣಿನಾಡಿನಲ್ಲಿ ಮಳೆರಾಯನ ಅಬ್ಬರ: ರಸ್ತೆಗಳು ಜಲಾವೃತ - latest rain news
ಬಳ್ಳಾರಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನೀರು ರಸ್ತೆ ಮೇಲೆಲ್ಲಾ ಹರಿದು ವಾಹನ ಸವಾರರು ಪರದಾಟ ಅನುಭವಿಸಿದರು.
ಗಣಿನಾಡಿನಲ್ಲಿ ಮಳೆರಾಯನ ಅರ್ಭಟ.
ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದ್ದು, ಪಟ್ಟಣದ ಅಂಡರ್ ಪಾಸ್ವೊಂದರಲ್ಲಿ ನೀರು ತುಂಬಿತ್ತು. ಇದರ ಜೊತೆಗೆ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ತುಂಬಿದ್ದು ಜನರು ಹೈರಾಣಾಗಿದ್ದರು.