ಕರ್ನಾಟಕ

karnataka

ETV Bharat / state

ಸಚಿವ ಶ್ರೀರಾಮುಲುಗೆ ಮಾತೃ ವಿಯೋಗ - ಸಚಿವ ಶ್ರೀರಾಮುಲುಗೆ ಮಾತೃ ವಿಯೋಗ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರ ತಾಯಿ ಹೊನ್ನೂರಮ್ಮ ನಿಧನ ಹೊಂದಿದ್ದಾರೆ.

minister Sriramulu mother died in Bellary
ಸಚಿವ ಶ್ರೀರಾಮುಲುಗೆ ಮಾತೃ ವಿಯೋಗ

By

Published : Aug 21, 2020, 8:41 AM IST

Updated : Aug 21, 2020, 10:30 AM IST

ಬಳ್ಳಾರಿ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರ ತಾಯಿ ಹೊನ್ನೂರಮ್ಮ (95) ಅನಾರೋಗ್ಯದ ಹಿನ್ನೆಲೆ ನಿಧನರಾಗಿದ್ದಾರೆ.

ಕಳೆದ ವಾರ ಸಚಿವ ಶ್ರೀರಾಮುಲು ಅವರ ಜೊತೆಗೆ ತಾಯಿಗೂ ಕೂಡ ಮಹಾಮಾರಿ ಕೊರೊನಾ ಸೋಂಕು ತಗುಲಿತ್ತು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಹೊನ್ನೂರಮ್ಮ, ಮೂರು ದಿನಗಳ ಹಿಂದಷ್ಟೇ ಬಳ್ಳಾರಿಗೆ ಬಂದಿದ್ದರು. ನಿನ್ನೆ ರಾತ್ರಿ ಮತ್ತೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಹೆಚ್ಚು ಮಂದಿ ಸೇರಬಹುದು ಎಂಬ ಕಾರಣಕ್ಕಾಗಿಯೇ ಇಂದು ಬೆಳಗಿನ ಜಾವ ಕುಟುಂಬ ಸದಸ್ಯರು, ಸಚಿವರ ಆಪ್ತರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತೆಂದು ಕುಟುಂಬದ ಮೂಲಗಳು ತಿಳಿಸಿವೆ.

Last Updated : Aug 21, 2020, 10:30 AM IST

ABOUT THE AUTHOR

...view details