ಬಳ್ಳಾರಿ:ಕೊರೊನಾ ವೈರಸ್ ತಡೆಗೆ ಸದ್ಯಕ್ಕಂತೂ ಯಾವುದೇ ಔಷಧ ಇಲ್ಲ. ಸಾರ್ವಜನಿಕರು ದಿನಕ್ಕೆ ಮೂರು ಬಾರಿಯಾದ್ರೂ ಉಪ್ಪು ನೀರು ಅಥವಾ ಅರಿಶಿಣ ನೀರಿಂದ ಗಂಟಲು ಗಾರ್ಗಲ್ ಮಾಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೆಲ್ತ್ ಟಿಪ್ಸ್ ನೀಡಿದ್ದಾರೆ.
ಬಳ್ಳಾರಿಯ ಮಿಲ್ಲರ್ ಪೇಟೆಯ ರೂಪನಗುಡಿ ರಸ್ತೆಯಲ್ಲಿಂದು ಬಡ ಮತ್ತು ಕೂಲಿ ಕಾರ್ಮಿಕರಿಗೆ ರೇಷನ್ ಕಿಟ್ಗಳನ್ನ ವಿತರಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೊರೊನಾ ವೈರಸ್ ತಡೆಗಾಗಿ ಸದ್ಯಕ್ಕಂತೂ ಯಾವುದೇ ಔಷಧ ರೆಡಿಯಾಗಿಲ್ಲ. ಹೀಗಾಗಿ, ದಿನಾಲೂ ಮೂರು ಬಾರಿಯಾದ್ರೂ ಉಪ್ಪು ನೀರು ಅಥವಾ ಅರಿಶಿಣ ಮಿಶ್ರಿತ ನೀರಿಂದ ಗಂಟಲು ಗಾರ್ಗಲ್ ಮಾಡಿಕೊಳ್ಳಬೇಕು. ಯಾಕಂದ್ರೆ ನಾನೊಂದು ಆರ್ಟಿಕಲ್ ಓದುತ್ತಿರುವಾಗ ಈ ಅಂಶವನ್ನ ಉಲ್ಲೇಖ ಮಾಡಲಾಗಿತ್ತು. ಚೈನಾ ದೇಶದಲ್ಲೂ ಕೂಡ ಬಹಳಷ್ಟು ಮಂದಿ ಉಪ್ಪು ಹಾಕಿ ಕೊಂಡು ಈ ಥರನಾದ ಗಾರ್ಗಲ್ ಮಾಡಿಕೊಂಡು ಈ ಮಹಾಮಾರಿ ಕೊರೊನಾ ವೈರಸ್ನಿಂದ ಗುಣಮುಖರಾಗಿದ್ದಾರೆ.