ಕರ್ನಾಟಕ

karnataka

ETV Bharat / state

ವಾಲ್ಮೀಕಿ ಬ್ಯಾನರ್ ಹರಿದಿದ್ದಕ್ಕೆ ರೆಡ್ಡಿ ಬಳಗದ ಆಪ್ತರ ನಡುವೆ ಕಾಳಗ - ಬಳ್ಳಾರಿ ಸುದ್ದಿ

ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಆಪ್ತರಾಗಿರುವ ಪ್ರಕಾಶ್​ ಬೆಂಬಲಿಗ ಬ್ಯಾನರ್​ಗೆ ಕಲ್ಲು ತೂರಾಟ ನಡೆಸಿ, ಬ್ಯಾನರ್ ಹರಿದು ಹಾಕಿದ್ದಾನೆ. ಪೊಲೀಸರ ಮಧ್ಯ ಪ್ರವೇಶದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ವಾಲ್ಮೀಕಿ ಬ್ಯಾನರ್ ಹರಿದಿದ್ದಕ್ಕೆ ರೆಡ್ಡಿ ಬಳಗದ ಆಪ್ತರ ನಡುವೆ ಕಾಳಗ

By

Published : Oct 15, 2019, 10:40 PM IST

Updated : Oct 16, 2019, 1:17 AM IST

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಹಿನ್ನೆಲೆ ಗಾಂಧಿನಗರದ ವಾಲ್ಮೀಕಿ ಹಾಸ್ಟೆಲ್​ ಬಳಿ ಶುಭಕೋರಿ ಹಾಕಲಾಗಿದ್ದ ಬ್ಯಾನರ್​ಗೆ ಕಲ್ಲುತೂರಿ, ಹರಿದು ಹಾಕಲಾಗಿದ್ದು, ಈ ಹಿನ್ನೆಲೆ ರೆಡ್ಡಿ ಬಳಗದ ಆಪ್ತರ ಮಧ್ಯೆ ಕಾಳಗ ನಡೆದಿದೆ.

ಶುಭಕೋರಿದ್ದ ಬ್ಯಾನರ್​ನಲ್ಲಿ ಕಾಂಗ್ರೆಸ್ ಮುಖಂಡ ಎನ್.ಸೂರ್ಯನಾರಾಯಣರೆಡ್ಡಿ ಅವರ ಭಾವಚಿತ್ರ ಇದ್ದಿದ್ದಕ್ಕೆ , ಮಾಜಿ ಸಚಿವರೊಬ್ಬರ ಆಪ್ತರಾಗಿರುವ ಪ್ರಕಾಶ್​ ಬೆಂಬಲಿಗ ಬ್ಯಾನರ್​ಗೆ ಕಲ್ಲು ತೂರಾಟ ನಡೆಸಿ, ಬ್ಯಾನರ್ ಹರಿದು ಹಾಕಿದ್ದಾನೆ. ಈ ವೇಳೆ ಅಲ್ಲಿಗೆ ಆಗಮಿಸಿದ ಕಾಂಗ್ರೆಸ್​ ನಾಯಕರೊಬ್ಬರ ಬೆಂಬಲಿಗರು ಬ್ಯಾನರ್​ ಹರಿದ ವ್ಯಕ್ತಿಯ ಜೊತೆ ಕಾದಾಟಕ್ಕೆ ಇಳಿದಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ವಾಲ್ಮೀಕಿ ಬ್ಯಾನರ್ ಹರಿದಿದ್ದಕ್ಕೆ ರೆಡ್ಡಿ ಬಳಗದ ಆಪ್ತರ ನಡುವೆ ಕಾಳಗ

ಈ ಘಟನೆ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಗಾಂಧಿ ನಗರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Last Updated : Oct 16, 2019, 1:17 AM IST

ABOUT THE AUTHOR

...view details