ಕರ್ನಾಟಕ

karnataka

ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರುವ ಹಂಪಿಯ ಪಾಕೃತಿಕ ಸೌಂದರ್ಯ

By

Published : Oct 7, 2019, 2:00 PM IST

ತಾಲೂಕಿನ ಸುತ್ತಮುತ್ತಲಿನ ಪರಿಸರವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಹೊಸಪೇಟೆ ನಗರದಿಂದ ಹಂಪಿಯ ಕಡೆಗೆ ಪ್ರಯಾಣ ಮಾಡುವ ಹಾದಿಯಲ್ಲಿರುವ ಪ್ರಾಕೃತಿಕ ವೈಭವವು ಪ್ರವಾಸಿಗರ ಮನಸ್ಸನ್ನು ಸೆಳೆಯುತ್ತಿದ್ದು, ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕಿನಿಸುತ್ತದೆ.

Hampi Vijayanagar

ಹೊಸಪೇಟೆ : ತಾಲೂಕಿನ ಸುತ್ತಮುತ್ತಲಿನ ಪರಿಸರವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಹೊಸಪೇಟೆ ನಗರದಿಂದ ಹಂಪಿಯ ಕಡೆಗೆ ಪ್ರಯಾಣ ಮಾಡುವ ಹಾದಿಯಲ್ಲಿರುವ ಪ್ರಾಕೃತಿಕ ವೈಭವವು ಪ್ರವಾಸಿಗರ ಮನಸ್ಸನ್ನು ಸೆಳೆಯುತ್ತಿದೆ.

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಹಂಪಿಯ ಪಾಕೃತಿಕ ಸೌಂದರ್ಯ

ತಾಲೂಕಿನಲ್ಲಿರುವ ಹಂಪಿ ಹಾಗೂ ಕಮಲಾಪುರದ ಕಡೆಗೆ ಒಮ್ಮೆ ಪ್ರಯಾಣ ಬೆಳೆಸಿದರೆ ಸಾಕು ನಮಗೆ ಸಾಕಷ್ಟು ಪ್ರವಾಸಿ ಸ್ಥಳಗಳು ನೋಡ ಸಿಗುತ್ತವೆ. ಅಂತಹ ಪ್ರವಾಸಿ ವೈಭವನ್ನು ಹಂಪಿಯ ಹಲವಾರು ಪುರಾವೆಗಳು ತಿಳಿಸುತ್ತವೆ. ವಿಜಯನಗರ ಸಾಮ್ರಾಜ್ಯದ ವಿಜಯ ವಿಠ್ಠಲ ದೇವಾಲಯದ ಕೆತ್ತನೆಯು ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತಿದೆ.

ತುಂಗಾನದಿ ತಡದಲ್ಲಿರುವ ವಿಜಯನಗರ ಸಾಮ್ರಾಜ್ಯದ ಈ ದೇವಾಲಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ದೇವಸ್ಥಾನವನ್ನು ನೋಡಲೆಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿರು ಇಲ್ಲಿಗೆ ಆಗಮಿಸುತ್ತಾರೆ. ಪ್ರವಾಸಿಗರಿಗೆ ಅನುಕುಲವಾಗಲೆಂದು ಪ್ರವಾಸೋದ್ಯಮ ಇಲಾಖೆ ಯಂತ್ರಚಾಲಿತ ವಾಹನಗಳನ್ನು ನೀಡಿದೆ.

ವಿಜಯ ವಿಠ್ಠಲ ದೇವಸ್ಥಾನದ ಅಕ್ಕ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುವ ದಾರಿಯಲ್ಲಿ ಸಿಗುವ ಪ್ರಕೃತಿಯ ಸೌಂದರ್ಯಕ್ಕೆ ಪ್ರವಾಸಿಗರು ಮನಸೋಲದೇ ಇರಲಾರರು.

ಹಂಪಿ ಸುತ್ತಮುತ್ತಲ ವಾತಾವರಣ ತುಂಬಾ ಚೆನ್ನಾಗಿದೆ. ನನಗೆ ತುಂಬಾ ಖುಷಿಯಾಯಿತು. ಮತ್ತೊಮ್ಮೆ ಹಂಪೆಯ ವಾತವರಣ ನೋಡಬೇಕಿನಿಸುತ್ತದೆ ಎನ್ನುತ್ತಾರೆ ಪ್ರವಾಸಿಗ ರಮೇಶ್.

ABOUT THE AUTHOR

...view details