ಕರ್ನಾಟಕ

karnataka

ETV Bharat / state

ಹಂಪಿ‌ ಉತ್ಸವ ಭಿತ್ತಿಪತ್ರ ಲೋಕಾರ್ಪಣೆ: ಜೇಬುಗಳ್ಳರ ಮೇಲೆ ನಿಗಾವಹಿಸಲು ಕರೆ - ಜನವರಿಯಲ್ಲಿ ಹಂಪಿ‌ ಉತ್ಸವ

ಹಂಪಿ ಉತ್ಸವ ಸಂಭ್ರಮದ 2020ರ ಭಿತ್ತಿಪತ್ರಗಳನ್ನು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ, ಎಂಎಲ್ಸಿಗಳಾದ ಅಲ್ಲಂ ವೀರಭದ್ರಪ್ಪ ಮತ್ತಿತರರು ಲೋಕಾರ್ಪಣೆ ಮಾಡಿದರು.

Hampi Uthsava poster release: alertness regarding pick pocket
ಹಂಪಿ‌ ಉತ್ಸವ ಭಿತ್ತಿಪತ್ರ ಲೋಕಾರ್ಪಣೆ: ಜೇಬುಗಳ್ಳರ ಮೇಲೆ ನಿಗಾವಹಿಸಲು ಕರೆ

By

Published : Jan 1, 2020, 2:12 PM IST

ಬಳ್ಳಾರಿ:ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿ‌ ಉತ್ಸವವನ್ನು ಜನವರಿ 10 ಮತ್ತು 11ರಂದು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ ಸಕಲ ತಯಾರಿ ನಡೆಸಿಕೊಂಡಿದೆ. ಈ ಸಂಬಂಧ ಹಂಪಿ ಉತ್ಸವ ಸಂಭ್ರಮದ 2020ರ ಭಿತ್ತಿಪತ್ರಗಳನ್ನು ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಹರಪನಹಳ್ಳಿ ಶಾಸಕ ಜಿ. ಕರುಣಾಕರರೆಡ್ಡಿ, ಎಂಎಲ್ಸಿಗಳಾದ ಅಲ್ಲಂ ವೀರಭದ್ರಪ್ಪ ಮತ್ತಿತರರು ಲೋಕಾರ್ಪಣೆ ಮಾಡಿದರು.

ಹಂಪಿ‌ ಉತ್ಸವ ಭಿತ್ತಿಪತ್ರ ಲೋಕಾರ್ಪಣೆ: ಜೇಬುಗಳ್ಳರ ಮೇಲೆ ನಿಗಾವಹಿಸಲು ಕರೆ

ಕಾರ್ಯಕ್ರಮದಲ್ಲಿ ಜಿಲ್ಲೆಯ ಹರಪನಹಳ್ಳಿ ಶಾಸಕ ಗಾಲಿ ಕರುಣಾಕರರೆಡ್ಡಿ ಮಾತನಾಡಿ, ಮೈಸೂರು ದಸರಾದಂತೆ ಹಂಪಿ ಉತ್ಸವವನ್ನೂ ಅದ್ಧೂರಿಯಾಗಿ ಆಚರಿಸುವ ಪ್ರತೀತಿ ಇದೆ. ಹೀಗಾಗಿ, ಈ ಬಾರಿಯ ಹಂಪಿ ಉತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಸಹಕರಿಸುವಂತೆ ಮನವಿ ಮಾಡಿದರು.

ಜೇಬುಗಳ್ಳರ ಮೇಲೆ ನಿಗಾವಹಿಸಿ:

ಉತ್ಸವದ ಸಂದರ್ಭದಲ್ಲಿ ಜೇಬುಗಳ್ಳರ ಹಾವಳಿ ಜಾಸ್ತಿ ಇರುತ್ತದೆ. ಹೀಗಾಗಿ, ಜಿಲ್ಲಾ ಪೊಲೀಸ್ ಇಲಾಖೆಯು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು. ದೂರದ ಊರುಗಳಿಂದ ಹಂಪಿ ಉತ್ಸವವನ್ನು ಕಣ್ತುಂಬಿಕೊಳ್ಳಲು ಬರುವ ಸಾವಿರಾರು ಪ್ರವಾಸಿಗರಿಗೆ ತೊಂದರೆಯಾಗಬಾರದು. ಇದೊಂದು ಸಣ್ಣ ವಿಷಯವಾದ್ರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಪೊಲೀಸರಿಗೆ ಸೂಚಿಸಿದರು.

ABOUT THE AUTHOR

...view details