ಕರ್ನಾಟಕ

karnataka

ETV Bharat / state

ಹಂಪಿ ವಿವಿ ಘಟಿಕೋತ್ಸವ: ಈ ಬಾರಿ ಡಾ. ಮಂಜುನಾಥ್​ ಸೇರಿ ಮೂವರಿಗೆ ನಾಡೋಜ ಗೌರವ - Nadoja Award to Three

ಸಾಹಿತ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರದ ಕೃಷ್ಣಪ್ಪ, ಜಿ.ಎಸ್.ಷಡಕ್ಷರಿ ಮತ್ತು ಆರೋಗ್ಯ ಕ್ಷೇತ್ರದ ಡಾ.ಸಿ.ಎನ್.ಮಂಜುನಾಥ ಅವರಿಗೆ ಈ ಬಾರಿಯ ನಾಡೋಜ ಗೌರವ ಪ್ರದಾನ.

Nadoja Award
ನಾಡೋಜ ಗೌರವ

By

Published : Dec 6, 2022, 6:45 AM IST

ವಿಜಯನಗರ: ಹಂಪಿ ಕನ್ನಡ ವಿವಿ ಪ್ರತಿ ವರ್ಷ ನೀಡುವ ನಾಡೋಜ ಗೌರವ ಪದವಿಗೆ ಈ ವರ್ಷ ಸಾಹಿತ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರದ ಕೃಷ್ಣಪ್ಪ, ಜಿ.ಎಸ್.ಷಡಕ್ಷರಿ ಮತ್ತು ಆರೋಗ್ಯ ಕ್ಷೇತ್ರದಿಂದ ಡಾ.ಸಿ.ಎನ್.ಮಂಜುನಾಥ ಅವರು ಆಯ್ಕೆಯಾಗಿದ್ದಾರೆ ಎಂದು ವಿವಿಯ ಮೂಲಗಳು ತಿಳಿಸಿವೆ.

ಡಿ.8 ರಂದು ನಡೆಯುವ ವಿವಿಯ 31ನೇ ನುಡಿಹಬ್ಬ- ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್​ಚಂದ್​ ಗೆಹ್ಲೋಟ್ ಈ ಪದವಿಗಳನ್ನು ಪ್ರದಾನ ಮಾಡಲಿದ್ದಾರೆ. ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ.ವೆಂಕಟೇಶ್ ಅವರು ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥನಾರಾಯಣ ಅವರು ಪಿಎಚ್‍ಡಿ ಮತ್ತು ಎಂ.ಫಿಲ್ ಪದವಿಗಳನ್ನು ನೀಡಲಿದ್ದಾರೆ.

ಇದನ್ನೂ ಓದಿ:ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರಕಟ: ರಾಜಭವನದಲ್ಲಿ ನಾಳೆ ಪ್ರಶಸ್ತಿ ಪ್ರದಾನ

ABOUT THE AUTHOR

...view details