ಕರ್ನಾಟಕ

karnataka

ETV Bharat / state

ಮುಂಗಾರು ಮಳೆಯ ನೀರಿನಲ್ಲಿ ರಾರಾಜಿಸಿದ ಹಂಪಿ ಗೋಪುರದ ಪ್ರತಿಬಿಂಬ.. - ಮುಂಗಾರು ಮಳೆ

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಶುರುವಾಗಿದೆ. ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯದ ಪ್ರತಿಬಿಂಬದ ಛಾಯೆಯು ಮಳೆಯ ನೀರಿನಲ್ಲಿ ರಾರಾಜಿಸುತ್ತಿದೆ.

hampi

By

Published : Apr 8, 2020, 12:57 PM IST

ಹೊಸಪೇಟೆ :ವಿಶ್ವದಐತಿಹಾಸಿಕ ಪ್ರವಾಸಿ ತಾಣ ಹಂಪಿ ಈಗ ಕೊವಿಡ್-19 ಹಿನ್ನೆಲೆಯಲ್ಲಿ ಪ್ರವಾಸಿಗರು, ಜನರಿಲ್ಲದೇ ಬಣಗುಡುತ್ತಿದೆ. ಮುಂಗಾರು ಮಳೆಯಿಂದ ಹಂಪಿಯ ವಿರೂಪಾಕ್ಷ ದೇವಾಲಯದ ಗೋಪುರದ ಪ್ರತಿಬಿಂಬ ಮಳೆ ನೀರಿನಲ್ಲಿ‌ ಸುಂದರವಾಗಿ ಕಾಣುತ್ತಿದೆ. ಸಾರ್ವಜನಿಕರು‌ ಗೋಪುರದ ಪ್ರತಿಬಿಂಬದ ನೋಡಿ ಸಂತೋಷ ಪಡುತ್ತಿದ್ದಾರೆ. ಹಂಪಿ ವೀಕ್ಷಿಸಲು ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಿದ್ದರು.

ಆದರೆ, ಕೊವಿಡ್-19 ಹಿನ್ನೆಲೆಯಿಂದಾಗಿ ವಿಶ್ವ ಪರಂಪರೆಯ ಹಂಪಿಯಲ್ಲಿ ಯಾರೊಬ್ಬರು ಕಾಣಿಸ್ತಿಲ್ಲ. ವಿರೂಪಾಕ್ಷ ದೇವಾಲಯದ ಪ್ರತಿಬಿಂಬ ಮಳೆಯ ನೀರಿನಲ್ಲಿ ರಾರಾಜಿಸುತ್ತಿದೆ. ಜನ ಜಂಗುಳಿಯಿಂದ ಗಿಜಿ‌ಗಿಜಿ ಎನ್ನುವಂತಹ ಸ್ಥಳ ಪ್ರವಾಸಿಗರಿಲ್ಲದೆ ಬಡವಾಗಿದೆ. ಮಳೆಯ ನೀರಿನಲ್ಲಿರುವ ಪ್ರತಿಬಿಂಬದ ಫೋಟೋವನ್ನು ನೋಡಿ ಸಂತೋಷ ಪಡುವಂತಾಗಿದೆ.

ABOUT THE AUTHOR

...view details