ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದಿಂದ ನದಿಗೆ 44,176 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದ್ದು, ನದಿಪಾತ್ರದ ಹಂಪಿ ಸ್ಮಾರಕಗಳು ಮುಳಗಡೆಯಾಗಿವೆ. 10 ಗೇಟ್ಗಳ ಮೂಲಕ ನದಿಗೆ 44,176 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ತುಂಗಾಭದ್ರಾ ನದಿಗೆ ನೀರು ಬಿಡುಗಡೆ: ಹಂಪಿಯ ಸ್ಮಾರಕಗಳು ಮುಳುಗಡೆ - ಹಂಪಿ ಸ್ಮಾರಕಗಳು ಮುಳಗಡೆ
ತುಂಗಾಭದ್ರಾ ನದಿಗೆ ಹೆಚ್ಚುವರಿ ನೀರು ಹರಿಸಿದ್ದರಿಂದ ಹಂಪಿಯ ಕೆಲ ಕರ್ಮಾಧಿ ಮಂಟಪಗಳು ಹಾಗೂ ಪುರಂದರ ಮಂಟಪ ಸಂಪೂರ್ಣ ಮುಳಗಡೆಯಾಗಿವೆ.
ಹಂಪಿಯ ಸ್ಮಾರಕಗಳು ಮುಳುಗಡೆ
ಸದ್ಯ ಜಲಾಶಯಕ್ಕೆ 46,376 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ 1632.87 ಅಡಿ ಹಾಗೂ 100.335 ಟಿಎಂಸಿ ನೀರು ಸಂಗ್ರಹವಾಗಿದೆ. ಈ ಹಿನ್ನೆಲೆ ತುಂಗಾಭದ್ರಾ ನದಿಗೆ ಹೆಚ್ಚುವರಿ ನೀರು ಹರಿಸಿದ್ದರಿಂದ ಹಂಪಿಯ ಕೆಲ ಕರ್ಮಾಧಿ ಮಂಟಪಗಳು ಹಾಗೂ ಪುರಂದರಮಂಟಪ ಸಂಪೂರ್ಣ ಮುಳಗಡೆಯಾಗಿವೆ. ಅಲ್ಲದೇ ಸ್ನಾನಘಟ್ಟಕ್ಕೆ ನೀರು ನುಗ್ಗಿದೆ. ಬೋಟ್ ಸಂಚಾರ ರದ್ದಾಗಿದ್ದು, ಹಂಪಿ ಹಾಗೂ ವಿರೂಪಾಕ್ಷೇಶ್ವರ ದೇವಾಲಯ ಸಂಪರ್ಕ ಕಡಿತಗೊಂಡಿದೆ.
ಇದನ್ನೂ ಓದಿ:ಧಾರವಾಡ: ಸರ್ಕಾರಿ ಆಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಶುಶ್ರೂಷಕಿ