ಹೊಸಪೇಟೆ: ಹಂಪಿಯಲ್ಲಿ ಸತತ ಮಳೆಯಿಂದಾಗಿ ಸ್ಮಾರಕ ಹಾಗೂ ಗೋಪುರಗಳ ಮೇಲೆ ಗಿಡಗಳ ಬೆಳೆಯುತ್ತಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ 10 ಜನರ ತಂಡವನ್ನು ರಚಿಸಿ ಸ್ವಚ್ಛತೆಗೆ ಮುಂದಾಗಿದೆ.
ಹಂಪಿ ಸ್ಮಾರಕಗಳ ಸ್ವಚ್ಛತೆಗೆ ಮುಂದಾದ ಪುರಾತತ್ವ ಸರ್ವೇಕ್ಷಣಾ ಇಲಾಖೆ - ಸ್ಮಾರಕಗಳ ಸ್ವಚ್ಛತೆಗೆ ಮುಂದಾದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ
ಸತತ ಮಳೆಯಿಂದ ಹಂಪಿಯ ಹಲವು ಸ್ಮಾರಕಗಳ ಬಳಿ ಬೆಳೆದಿರುವ ಗಿಡಗಳನ್ನು ತೆಗೆದು ಸ್ವಚ್ಛ ಮಾಡಲು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ 10 ಜನರ ತಂಡವನ್ನು ರಚಿಸಿದೆ.
ವಿರೂಪಾಕ್ಷೇಶ್ವರ ದೇವಸ್ಥಾನ, ಬಿಷ್ಟಪ್ಪಯ್ಯ ಗೋಪುರ, ಸಾಲು ಮಂಟಪ ಸೇರಿದಂತೆ ನಾನಾ ಸ್ಮಾರಕಗಳಲ್ಲಿ ಬೆಳೆದಿರುವ ಗಿಡಳನ್ನು ಸ್ವಚ್ಛತೆ ಮಾಡಲು ಪುರಾತತ್ವ ಇಲಾಖೆ ಮುಂದಾಗಿದೆ. ಇದರಿಂದ ಸ್ಮಾರಕ ರಕ್ಷಣೆ ಹಾಗೂ ಸೌಂದರ್ಯ ಧಕ್ಕೆಯಾಗದಂತಾಗುತ್ತದೆ.
ಕೇವಲ ಸ್ಮಾರಕಗಳಲ್ಲಿನ ಗಿಡಗಳನ್ನು ಸ್ವಚ್ಛತೆ ಮಾಡುವುದಕ್ಕರ ಪುರಾತತ್ವ ಇಲಾಖೆ ಮುಂದಾಗಬಾರದು. ಬದಲಿಗೆ ಕಡಲೆಕಾಳು ಗಣಪತಿ ದೇವಸ್ಥಾನ ಹಿಂಭಾಗ ಹಾಗೂ ಬಿಷ್ಟಪ್ಪಯ್ಯ ಗೋಪುರ ಮುಂಭಾಗದ ಸೇರಿದಂತೆ ನಾನಾ ಕಡೆ ಪಾರ್ಥೇನಿಯಂ ಗಿಡಗಳು ಯತೇಚ್ಛವಾಗಿ ಬೆಳೆದಿವೆ. ಅವುಗಳನ್ನು ಸ್ವಚ್ಛತೆ ಮಾಡಲು ಮುಂದಾಗಬೇಕು. ಅಲ್ಲದೇ, ಕಸವನ್ನು ಎಸೆಯಲು ಡಸ್ಟ್ ಬೀನ್ ಸೌಲಭ್ಯವನ್ನು ಒದಗಿಸಬೇಕಾಗಿದೆ.