ಹೊಸಪೇಟೆ:ಐತಿಹಾಸಿಕ ಹಂಪಿ ಚಕ್ರತೀರ್ಥ ಕೋದಂಡರಾಮ ದೇವಸ್ಥಾನ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು, 48 ಸಾವಿರ ರೂ. ಸಂಗ್ರಹವಾಗಿದೆ.
ಹುಂಡಿಯನ್ನು 2019 ಡಿಸೆಂಬರ್ 13 ರಂದು ಅಳವಡಿಸಲಾಗಿತ್ತು. ತುಂಗಭದ್ರಾ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಹರಿಸಲಾಗುತ್ತಿದ್ದು, ಹಾಗಾಗಿ ಹುಂಡಿಯನ್ನು ಎಣಿಕೆ ಮಾಡಲಾಗಿದೆ ಎಂದು ವಿರುಪಾಕ್ಷೇಶ್ವರ ದೇವಸ್ಥಾನದ ಇಒ ಎಂ.ಎಚ್.ಪ್ರಕಾಶರಾವ್ ತಿಳಿಸಿದ್ದಾರೆ.