ಹೊಸಪೇಟೆ/ಬಳ್ಳಾರಿ:ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯಧನ ಹಣವನ್ನು ವಿಶ್ವವಿಶ್ವವಿದ್ಯಾಲಯವು ಮಂಜೂರು ಮಾಡ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿಗಳು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ.
ಎರಡು ವರ್ಷಗಳಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಾಯಧನ ಹಣವನ್ನು ನೀಡುತ್ತಿಲ್ಲ.ಈ ಕಾರಣಕ್ಕಾಗಿ ಹೋರಾಟವನ್ನು ಮಾಡುತ್ತಿದ್ದೇವೆ ಎಂದು ಸಂಶೋಧನಾ ವಿದ್ಯಾರ್ಥಿಗಳು ತಿಳಿಸಿದ್ರು. ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಅನ್ಯಾಯವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು.ದಲಿತ ಸಮುದಾಯದ 500 ವಿದ್ಯಾರ್ಥಿಗಳು ಸಂಶೋಧನೆಯಲ್ಲಿದ್ದಾರೆ. 2016_17 ನೇ ಸಾಲಿನ ವಿದ್ಯಾರ್ಥಿಗಳು ಬಾಕಿ ಹಣ ಹಾಗೆ ಇದೆ. 2017_18 ನೇ ವರ್ಷದ ಸಹಾಯಧನವನ್ನು ಮಂಜೂರು ಮಾಡಿಲ್ಲ.,2018_19 ನೇ ಸಾಲಿನಲ್ಲಿ ಸಹಾಯ ಧನವು ಮಂಜೂರಾಗದೇ ಇರುವುದು ದೊಡ್ಡ ದುರಂತ ಎನ್ನುತ್ತಾರೆ ವಿದ್ಯಾರ್ಥಿಗಳು.