ಕರ್ನಾಟಕ

karnataka

ETV Bharat / state

ಹಂಪಿ ವಿವಿಯಲ್ಲಿ ಹೆಸರಿಗಷ್ಟೇ ಬಂಜಾರ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರ - ಬಂಜಾರ ಭಾಷಾ ಅಭಿವೃದ್ಧಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಂಜಾರ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರ ಪ್ರಾರಂಭವಾಗಿ ಒಂದೂವರೆ ವರ್ಷ ಕಳೆದರೂ ಇದುವರೆಗೂ ಒಂದು ಭಾಷಾ ನಿಘಂಟು ಕೂಡ ಪ್ರಕಟವಾಗಿಲ್ಲ.‌

Banjara Language Development Studies Center
ಬಂಜಾರ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರ

By

Published : Sep 25, 2020, 5:50 PM IST

ಹೊಸಪೇಟೆ:ಕನ್ನಡ ವಿಶ್ವವಿದ್ಯಾಲಯದಲ್ಲಿ ಬಂಜಾರ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರ ಕೇವಲ ಕಟ್ಟಡಕ್ಕೆ ಸೀಮಿತವಾಗಿದ್ದು, ಅದರಿಂದ ಬಹು ಮುಖ್ಯ ಅಧ್ಯಯನಗಳು ಹೊರ ಬರುತ್ತಿಲ್ಲ.‌ ಹೆಸರಿಗಷ್ಟೇ ಅಧ್ಯಯನ ಕೇಂದ್ರ ತೆರೆಯಲಾಗಿದ್ದು, ಭಾಷಾ ಸಂಶೋಧನೆ ನಡೆಯುತ್ತಿಲ್ಲ.

2018 ಸೆಪ್ಟೆಂಬರ್‌ 12 ರಂದು ಬಂಜಾರ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರ ಕಟ್ಟಡ ಶಿಲನ್ಯಾಸವನ್ನ ನೆರವೇರಿಸುತ್ತಾರೆ. ‌ಬಳಿಕ 2019 ಫೆಬ್ರವರಿ 12 ರಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಕಟ್ಟಡವನ್ನು ಉದ್ಘಾಟಿಸುತ್ತಾರೆ. ಆಗ ಮಲ್ಲಿಕಾ ಘಂಟಿ ಅವರು ಕುಲಪತಿಗಳಾಗಿದ್ದರು.‌ ಕಳೆದ ಒಂದೂವರೆ ವರ್ಷದಿಂದ ಯಾವುದೇ ಕಾರ್ಯಚಟುವಟಿಕೆ ನಡೆಯದೇ ಇರುವುದು ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಂಜಾರ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರ

ನಿಘಂಟು‌ ಕಗ್ಗಂಟು: ಕಳೆದ ಒಂದೂವರೆ ವರ್ಷಗಳಿಂದ ಬಂಜಾರ ಕನ್ನಡ ಸಾಮಾನ್ಯ ನಿಘಂಟಿಗಾಗಿ ಮೂರು‌ ಜನ ಪ್ರಾಧ್ಯಾಪಕರು ಹಾಗೂ 30 ಜನ ಸಂಶೋಧನಾ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಎಲ್ಲ ಕಡೆ ಸಂಚರಿಸಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.‌ ಆದರೆ, ಇಲ್ಲಿವರೆಗೂ ಭಾಷಾ ನಿಗಂಟು ಪ್ರಕಟವಾಗಿಲ್ಲ.‌ ಆ ಕಾರ್ಯ ಕಗ್ಗಂಟಾಗಿ ಉಳಿದಿದೆ.

ಅಧ್ಯಯನ ಕೇಂದ್ರಕ್ಕೆ ಬೀಗ: ಅನುದಾನ ಕೊರತೆ ಎಂದು ಅಧ್ಯಯನ ಕೇಂದ್ರಕ್ಕೆ ಬೀಗ ಜಡೆಯಲಾಗಿದೆ. ‌ಅಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಕೋಟಿ ಅನುದಾನದಿಂದ ನಿರ್ಮಿಸಿದ ಕಟ್ಟಡ ಈಗ ಪಾಳು ಬಿದ್ದಿದೆ. ಭಾಷಾ ಅಭಿವೃದ್ಧಿಗೆ ಉಪಯೋಗವಾಗಿದ್ದ ಕಟ್ಟಡ ಇದೀಗ ಅನಾಥವಾಗಿದೆ.

ಅಧ್ಯಯನ ಕೇಂದ್ರಕ್ಕೆ ಬೇಕಿದೆ ಕಾಯಕಲ್ಪ:ಬಂಜಾರ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಬೇಕಾಗಿದೆ.‌ ಬಂಜಾರ ಸಮುದಾಯದ ಕುರಿತು ಅಧ್ಯಯನಗಳ ನಡೆಯಬೇಕಾಗಿದೆ. ಬಂಜಾರ ನಿಘಂಟಿನ ಕಾರ್ಯ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕಾಗಿದೆ. ಸಂಪನ್ಮೂಲಗಳ ವ್ಯಕ್ತಿಗಳನ್ನು ಅಧ್ಯಯನ ಕೇಂದ್ರಕ್ಕೆ ನೇಮಕ ಮಾಡಬೇಕಾಗಿದೆ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಪಿ.ರಾಜೀವ್ ಅವರು ಕಾರ್ಯನ್ಮುಖರಾಗಬೇಕಾಗಿದೆ.

ಬಂಜಾರ ಸಮುದಾಯದ ಕುರಿತು ಅಧ್ಯಯನ ಕೇಂದ್ರವು ಸಮಗ್ರ ಅಧ್ಯಯನ ಮಾಡಬೇಕಿತ್ತು.‌ ಆದರೆ, ಆ‌ ಕಾರ್ಯವಾಗುತ್ತಿಲ್ಲ. ಸಮುದಾಯದಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ಊರಿಂದ ಊರಿಗೆ ಹೋಗುವ ಪರಿಸ್ಥಿತಿ ಇದೆ.‌ ಸರ್ಕಾರದಿಂದ ಹಲವು ಯೋಜನೆಗಳು ತಂದರು ಸಮುದಾಯದ ಬೆಳವಣಿಗೆಯಲ್ಲಿ ಪಾತ್ರವಹಿಸಿಲ್ಲ.‌ ಈ ಕುರಿತು ಸಂಶೋಧನೆಗಳು‌ ನಡೆದು ಸಮುದಾಯಕ್ಕೆ ದಾರಿ ದೀಪವಾಗಬೇಕಾಗಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ.ರಮೇಶ ಅವರು ಮಾತನಾಡಿ, ಬಂಜಾರಾ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರಕ್ಕೆ ಮೊದಲನೇ ಕಂತಿನಲ್ಲಿ 1.48 ಕೋಟಿ ರೂ. ಅನುದಾನ ಕಲ್ಪಿಸಲಾಗಿತ್ತು. ಆ ಅನುದಾನದಲ್ಲಿ ಕಟ್ಟಡ ಹಾಗೂ ನಿಘಂಟು ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಈಗ ನಿಘಂಟು ಪ್ರಕಟಗೊಳ್ಳಬೇಕಾಗಿದೆ. ಬಂಜಾರ ಕನ್ನಡ ಸಾಮಾನ್ಯ ನಿಘಂಟು ಕಾರ್ಯಕ್ಕೆ ಮೂರು ಜನ ಪ್ರಾಧ್ಯಾಪಕರು ಹಾಗೂ 30 ಸಂಶೋಧನಾ ಸಹಾಯಕರು ಕೆಲಸ ಮಾಡಿದ್ದಾರೆ.‌ ಈಗಾಗಲೇ 500 ಪುಟಗಳ ಕರಡು ಸಿದ್ಧವಾಗಿದೆ.‌‌ ಕೆಳ ದಿನಗಳ ಹಿಂದೆ ಭಾಷಾ ಅಭಿವೃದ್ಧಿ ಅಧ್ಯಯನ ಕೇಂದ್ರ ತಜ್ಞರ ಸಲಹಾ ಸಮಿತಿ ಸಭೆ ನಡೆಸಲಾಗಿದೆ. ಎರಡನೇ ಕಂತು 1.48. ಕೋಟಿ ನೀಡಬೇಕಾಗಿದೆ. ಅನುದಾನದ ಅಲಭ್ಯತೆಯಿಂದ ಅಧ್ಯಯನ ಕೇಂದ್ರವನ್ನು ಮುಚ್ಚಲಾಗಿದೆ ಎಂದು ಹೇಳಿದರು.‌

ABOUT THE AUTHOR

...view details