ಬಳ್ಳಾರಿ:ಹೊಸಪೇಟೆ ತಾಲೂಕಿನ ಹಂಪಿ ಉತ್ಸವದಲ್ಲಿ ಶ್ರೀಕೃಷ್ಣದೇವರಾಯ ಮುಖ್ಯ ವೇದಿಕೆಯ ಮುಂಭಾಗದಲ್ಲಿ ಪೊಲೀಸ್ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ತೋರಿರುವ ಆರೋಪ ಕೇಳಿ ಬಂದಿದೆ.
ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯಿಂದ ಕರ್ತವ್ಯ ಲೋಪ ಆರೋಪ.. ವೇದಿಕೆಯ ಮುಂಭಾಗದಲ್ಲಿ ವಿಐಪಿ ಮತ್ತು ವಿವಿಐಪಿ ಹಾಗೂ ಮಾಧ್ಯಮವರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಚಿತ್ರನಟ ಯಶ್ ಬರುವ ಮೊದಲೇ ಈ ಸ್ಥಳಗಳಲ್ಲಿ ಯುವಕರನ್ನು ವಿಐಪಿ ಮತ್ತು ವಿವಿಐಪಿ ಹಾಗೂ ಮಾಧ್ಯಮ ಸ್ಥಳಕ್ಕೆ ಬ್ಯಾರಿಕೇಡ್‌ಗಳನ್ನ ಜಿಗಿದು ಯುವಕ-ಯುವತಿಯರುಕಾರ್ಯಕ್ರಮ ನೋಡುವವರಿಗೆ ತೊಂದರೆ ಉಂಟು ಮಾಡಿದರು.
ವೇದಿಕೆಯ ಮುಂದೆ ಬ್ಯಾರಿಕೇಡ್, ಗೇಟ್ಗಳನ್ನು ಹಾರಿ ಬಂದ ಯುವಕ-ಯುವತಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೋಡುವ ಪ್ರೇಕ್ಷಕರಿಗೆ ತೊಂದರೆಯಾಯ್ತು. ಜೊತೆಗೆ ನೂಕುನುಗ್ಗಲು ಸಹ ಉಂಟಾಯಿತು.ಮೊಬೈಲ್ ನೆಟ್‌ವರ್ಕ್ ಇಲ್ಲದ ಕಾರಣ ಹಂಪಿ ಉತ್ಸವದ 27 ಸಮಿತಿಗಳ ಕಾರ್ಯಗಳ ಸಂವಹನಕ್ಕೆ ವಾಕಿಟಾಕಿ ಬಳಕೆ ಮಾಡಲಾಗಿತ್ತು.
ಈಟಿವಿ ಭಾರತದೊಂದಿಗೆ ಮಾತನಾಡಿದ ಬಳ್ಳಾರಿ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಡಾ.ರಾಮೇಶ್ವರಪ್ಪ ಅವರು, ಉತ್ಸವದ ಅಂಗವಾಗಿ ಲಕ್ಷಾಂತರ ಜನರು ಬರುವ ಕಾರಣ ಅವರಿಗೆ ಬೇಕಾದ ಸೌಲಭ್ಯಕ್ಕಾಗಿ ವಾಕಿಟಾಕಿ ಬಳಿಕೆ ಮಾಡಲಾಗುತ್ತಿದೆ. ಮೊಬೈಲ್ನಲ್ಲಿ ನೆಟ್ವರ್ಕ್ ಇಲ್ಲದ ಕಾರಣ ಜಿಲ್ಲಾಧಿಕಾರಿ 27 ಸಮಿತಿಗಳನ್ನು ರಚನೆ ಮಾಡಿದ್ದರು. ಮುಖ್ಯವಾಗಿರುವ ಅಧಿಕಾರಿಗಳಿಗೆ ವಾಕಿಟಾಕಿಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.