ಹೊಸಪೇಟೆ/ಬಳ್ಳಾರಿ: ಐತಿಹಾಸಿಕ ಪರಂಪರೆಯನ್ನು ಹೊಂದಿರುವ ಹಂಪಿಯಲ್ಲಿ ಬಲಪೂಜೆ ನಿಮಿತ್ತವಾಗಿ ದೇವಾಲಯದಲ್ಲಿ ಭಕ್ತರು ಮತ್ತು ಪ್ರವಾಸಿಗರು ದೀಪಗಳನ್ನು ಬೆಳಗಿದರು.
ಹಂಪಿಯಲ್ಲಿ ದೀಪೋತ್ಸವ.. ಪಾರ್ವತಿ ಪರಮೇಶ್ವರನಿಗೆ ನಿಶ್ಚಿತಾರ್ಥ - ಹಂಪಿ ದೇವಾಲಯದಲ್ಲಿ ಪಾರ್ವತಿ ಪರಮೇಶ್ವರನಿಗೆ ನಿಶ್ಚಿತಾರ್ಥ ಸುದ್ದಿ
ಹಂಪಿಯಲ್ಲಿ ಬಲಪೂಜೆ ಅಂಗವಾಗಿ ದೀಪೋತ್ಸವ ಕಾರ್ಯಕ್ರಮ ನಡೆಸಲಾಗಿದ್ದು, ಪಾರ್ವತಿ ಪರಮೇಶ್ವರನಿಗೆ ನಿಶ್ಚಿತಾರ್ಥ ಕಾರ್ಯಕ್ರಮ ಮಾಡಲಾಯ್ತು.
ಪ್ರತಿ ವರ್ಷವು ಬನದ ಹುಣ್ಣಿಮೆಯ ಮೂರನೇ ದಿನದಂದು ವಿರೂಪಾಕ್ಷ ದೇವಸ್ಥಾನದ ಮುಂದೆ ದೀಪಗಳನ್ನು ಬೆಳಗಿಸಲು ಅವಕಾಶವನ್ನು ನೀಡುತ್ತಾರೆ. ಹಂಪಿಯ ವಿರೂಪಾಕ್ಷ ಹಾಗೂ ತಾಯಿ ಭುವನೇಶ್ವರಿ ದೇವಿಗೆ ದೀಪಗಳನ್ನು ಹಚ್ಚುವುದರಿಂದ ಭಕ್ತರಿಗೆ ಶುಭವಾಗುತ್ತದೆ. ಮದುವೆಯಾಗದವರಿಗೆ ಮದುವೆಯಾಗುತ್ತದೆ,ಮಕ್ಕಳಾಗದವರಿಗೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.ಇನ್ನೂ ಈ ದಿನದಂದು ಪರಮೇಶ್ವರಿನಿಗೆ ಹಾಗೂ ಪಾರ್ವತಿಗೆ ಸಂಪ್ರದಾಯದಂತೆ ನಿಶ್ಚಿತಾರ್ಥವನ್ನು ಮಾಡಲಾಗುತ್ತದೆ. ಹಂಪಿಯ ವಿರುಪಾಕ್ಷ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ರಾಮ ಲಕ್ಷ್ಮಣರ ಗುಡಿಯ ಮುಂದೆ ವಿಶೇಷ ಪೂಜೆ ಮಾಡಿ ಅವರಿಗೆ ಮದುವೆಗೆ ಸಿದ್ಧತೆಯನ್ನು ನಡೆಸುತ್ತಾರೆ.ಹಂಪಿಯ ಜಾತ್ರೆಯಲ್ಲಿ ಮದುವೆಯನ್ನು ಮಾಡಿಸಲಾಗುತ್ತದೆ.
ಪ್ರವಾಸಿಗರು ಹಾಗೂ ಭಕ್ತರು ದೇವಾಲಯದ ಮುಂಭಾಗದಲ್ಲಿ ದೀಪಗಳಿಂದ ಅಲಂಕಾರ ಮಾಡಿ ದೇವರಿಗೆ ಪೂಜೆಯನ್ನು ಸಲ್ಲಿಸಿದರು.ಪರಮೇಶ್ವರನಿಗೆ ಹಾಗೂ ಪಾರ್ವತಿಗೆ ನಿಶ್ಚಿತಾರ್ಥ ಮಾಡಲು ದೇವರನ್ನು ಹೂಗಳಿಂದ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಸಂಪ್ರದಾಯದಂತೆ ಭವ್ಯ ಮೆರವಣಿಗೆಯಲ್ಲಿ ಕರೆತಂದು ರಾಮಲಕ್ಷ್ಮಣರ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.