ಕರ್ನಾಟಕ

karnataka

ETV Bharat / state

ಹೆಲಿಕಾಪ್ಟರ್​ ಏರಿ ಹಂಪಿಯ ವಿಹಂಗಮ ನೋಟ ನೋಡ ಬನ್ನಿ - A panoramic view of Hampi

ಹಂಪಿ ಉತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತ ಹಂಪಿ ಬೈ ಸ್ಕೈಗೆ ವ್ಯವಸ್ಥೆ ಮಾಡಿದ್ದು, 3,000 ಸಾವಿರ ರೂಪಾಯಿ ಶುಲ್ಕವನ್ನು‌ ನಿಗದಿ ಮಾಡಲಾಗಿದೆ ಹಾಗೂ ಜನವರಿ 14ರವರೆಗೆ ಈ ಹಂಪಿ ಬೈ ದಿ ಸ್ಕೈ ನಡೆಯಲಿದೆ.

hampi-by-sky-to-hampi-festival
hampi-by-sky-to-hampi-festival

By

Published : Jan 11, 2020, 2:00 PM IST

ಬಳ್ಳಾರಿ:ಹಂಪಿ ಉತ್ಸವದ ಅಂಗವಾಗಿ ಬಳ್ಳಾರಿ ಜಿಲ್ಲಾಡಳಿತ ಈ ಬಾರಿಯೂ ಹಂಪಿ ಬೈ ಸ್ಕೈಗೆ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ಎರಡು ಹೆಲಿಕಾಪ್ಟರ್​ಗಳು ಬಂದಿದ್ದು, ಒಂದು ಹಂಪಿ ಉತ್ಸವಕ್ಕೆ, ಮತ್ತೊಂದು ಆನೆಗುಂದಿ ಉತ್ಸವಕ್ಕೆ ತರಿಸಲಾಗಿದೆ.

ಹಂಪಿಯ ವಿಹಂಗಮ ನೋಟ ನೋಡ ಬನ್ನಿ

ಹಂಪಿಯ ವಿಹಂಗಮ ನೋಟ, ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠ್ಠಲ ಟೆಂಪಲ್, ಲೋಟಸ್ ಮಹಲ್ ಸೇರಿದಂತೆ ವಿವಿಧ ಸ್ಮಾರಕಗಳು, ತುಂಗಾಭದ್ರಾ ನದಿ, ಬೆಟ್ಟ-ಗುಡ್ಡಗಳ ನೈಸರ್ಗಿಕ ಸೌಂದರ್ಯವನ್ನು ಆಗಸದಿಂದ ನೋಡುವುದರ ಮೂಲಕ ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರಿಗೆ ಲಭಿಸಿದೆ.

2 ವರ್ಷದ ಮೇಲ್ಪಟ್ಟ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ 3,000 ಸಾವಿರ ರೂಪಾಯಿ ಶುಲ್ಕವನ್ನು‌ ನಿಗದಿ ಮಾಡಲಾಗಿದೆ. ದಿನಕ್ಕೆ 9ರಿಂದ 10 ಟ್ರಿಪ್ ವ್ಯವಸ್ಥೆ ಮಾಡಲಾಗಿದೆ. ಒಂದು ಟ್ರಿಪ್​ನಲ್ಲಿ ಒಮ್ಮೆಗೆ 6 ಜನ ಹಂಪಿಯ ಸೌಂದರ್ಯವನ್ನು ಸವಿಯಬಹುದಾಗಿದೆ.

ಹಂಪಿ ಬೈ ದಿ ಸ್ಕೈ ಬೆಳಗ್ಗೆ 11 ಗಂಟೆಯಿಂದ ಸಂಜೆ 6ರವರೆಗೆ ಇರುತ್ತದೆ. ಒಂದು ಸುತ್ತಿಗೆ 8 ನಿಮಿಷದ ಕಾಲಮಿತಿ ನಿಗದಿ ಮಾಡಿದ್ದು, ಜನವರಿ 14ರವರೆಗೆ ಈ ಹಂಪಿ ಬೈ ದಿ ಸ್ಕೈ ನಡೆಯಲಿದೆ ಎಂದು ಹೆಲಿಕಾಪ್ಟರ್​ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



ABOUT THE AUTHOR

...view details