ಕರ್ನಾಟಕ

karnataka

ETV Bharat / state

ತೋಳು ತಟ್ಟಿ, ಬಾ..ಲೇ ಮಗನೇ.. ಹಗರಿಬೊಮ್ಮನಹಳ್ಳಿ ಶಾಸಕರ ದುಂಡಾವರ್ತನೆ! - Hagaribommanahalli MLA Bhimanaik Hooliganism

ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಭೀಮಾನಾಯ್ಕ ದುಂಡಾವರ್ತನೆಯ ವಿಡಿಯೋ ವೈರಲ್​ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ.

Hagaribommanahalli MLA Bhimanaik Hooliganism video viral
ಹಗರಿಬೊಮ್ಮನಹಳ್ಳಿ ಶಾಸಕರ ದುಂಡಾವರ್ತನೆ.!

By

Published : Nov 8, 2020, 11:11 AM IST

ಬಳ್ಳಾರಿ:ಜಿಲ್ಲೆಯ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರು ತೋಳು ತಟ್ಟಿ ಬಾ ಲೇ ಮಗನೇ ಎಂದು ಎದುರಾಳಿಗಳಿಗೆ ಅವಾಜ್​ ಹಾಕುವ ವಿಡಿಯೋ ತುಣುಕೊಂದು ವೈರಲ್ ಆಗಿದೆ.

ಹಗರಿಬೊಮ್ಮನಹಳ್ಳಿ ಶಾಸಕರ ದುಂಡಾವರ್ತನೆ.!

ಜಾಲತಾಣಗಳಲ್ಲಿ‌ ಈ ವಿಡಿಯೋ ವೈರಲ್ ಆಗಿದ್ದು, ಶಾಸಕರ ಈ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ನಿನ್ನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ‌ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಪ್ರಕ್ರಿಯೆ ನಡೆದಿತ್ತು.‌ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕೆಲಕಾಲ ನೂಕಾಟ-ತಳ್ಳಾಟ ಏರ್ಪಟ್ಟಿತ್ತು.‌ ಅದನ್ನ ನಿಯಂತ್ರಿಸಲು ಹಗರಿಬೊಮ್ಮನಹಳ್ಳಿ ಪೊಲೀಸರು ಹರಸಾಹಸ ಪಡುತ್ತಿದ್ದರು. ಈ ವೇಳೆ ಶಾಸಕರು ತೋಳು ತಟ್ಟಿ ಜಗಳಕ್ಕೆ ಮುಂದಾಗಿದ್ದ ವಿಡಿಯೋ ಇದಾಗಿದೆ ಎಂದು ಹೇಳಲಾಗ್ತಿದೆ.

For All Latest Updates

TAGGED:

ABOUT THE AUTHOR

...view details