ಕರ್ನಾಟಕ

karnataka

ETV Bharat / state

ಕಿಡಿಗೇಡಿಗಳಿಂದ ಅರಣ್ಯಕ್ಕೆ ಬೆಂಕಿ ಆರೋಪ : 15 ಎಕರೆಯಷ್ಟು ಹುಲ್ಲುಗಾವಲು ಪ್ರದೇಶ ಭಸ್ಮ - Hagaribommanahalli forest destroyed by fire

ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿಹಚ್ಚಿರುವ ಪರಿಣಾಮ ಸುಮಾರು 10 ರಿಂದ 15 ಎಕರೆ ಪ್ರದೇಶದಲ್ಲಿದ್ದ ಹುಲ್ಲು ನಾಶವಾಗಿದೆ ಎಂದು ಅಗ್ನಿ ಶಾಮಕದಳದ ಸಿಬ್ಬಂದಿ ಆರೋಪಿಸಿದ್ದಾರೆ..

Hagaribommanahalli forest burns by fire
ಅರಣ್ಯ ಪ್ರದೇಶದಲ್ಲಿನ 15 ಎಕರೆ ಹುಲ್ಲು, ಗಿಡಗಳಿಗೆ ಬೆಂಕಿ

By

Published : Mar 14, 2021, 8:53 PM IST

ವಿಜಯನಗರ :ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣಕಲ್ಲು ಗ್ರಾಮದಲ್ಲಿನ ಅರಣ್ಯ ಪ್ರದೇಶದ 10 ರಿಂದ 15 ಎಕರೆಯಲ್ಲಿ ಬೆಳೆದಿದ್ದ ಹುಲ್ಲು ಹಾಗೂ 100 ರಿಂದ 150 ಗಿಡಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ ಎಂದು ಅಗ್ನಿ ಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ:ರಾಜ್ಯದಲ್ಲಿಂದು 934 ಮಂದಿಗೆ ಸೋಂಕು: ಮೂವರು ಕೋವಿಡ್​ಗೆ ಬಲಿ

ಯಾರೋ ಕಿಡಿಗೇಡಿಗಳು ಹುಲ್ಲಿಗೆ ಬೆಂಕಿಹಚ್ಚಿದ ಪರಿಣಾಮ ಈ ರೀತಿಯಾಗಿ ಹುಲ್ಲು, ಗಿಡಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿ ವಿಜಯ್ ಕುಮಾರ್ ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ABOUT THE AUTHOR

...view details