ಹೊಸಪೇಟೆ (ವಿಜಯನಗರ): ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಠಾಧೀಶರು ಯಡಿಯೂರಪ್ಪನವರ ಚೇಲಾಗಳು ಅಂತಾ ಪದ ಬಳಸಿದ್ದಾರೆ. ನಿಮ್ಮನ್ನ ಪಕ್ಷದಿಂದ ಹೊರ ಹಾಕಿದಾಗ ನೀವು ಯಡಿಯೂರಪ್ಪನವರ ಚೇಲಾಗಳಾಗಿದ್ದಿಲ್ಲವೇ ಎಂದು ವಿಜಯನಗರದ ಹಿರೇಹಡಗಲಿಯ ಹಾಲಸ್ವಾಮಿ ಮಠದ ಹಾಲಸ್ವಾಮೀಜಿಗಳು ಯತ್ನಾಳ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಮಠಾಧೀಶರ ಬಗ್ಗೆ ಶಾಸಕ ಬಸವನಗೌಡ ಯಾತ್ನಾಳ್ ಹಗುರವಾಗಿ ಹೇಳಿಕೆ ನೀಡಿದ್ದ ಕುರಿತು ಮಾತನಾಡಿದ ಅವರು, ನೀವು ಚೇಲಾಗಾಳಾಗಿದ್ದಕ್ಕೆ ನಿಮಗೆ ಆ ಪರಿಕಲ್ಪನೆ ಇದೆ. ಯಡಿಯೂರಪ್ಪರನ್ನು ಒಂದು ಕಾಲದಲ್ಲಿ ದೇವರು ಅಂತಾ ನೀವೇ ಪೂಜೆ ಮಾಡ್ತಿದ್ರಿ. ಈಗ ಹಗುರವಾಗಿ ಮಾತಾಡೋದು ಎಷ್ಟು ಸರಿ.
ನಾವು ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದೇವೆ ಎಂಬುದಕ್ಕೆ ನೀವು ಮಠಾಧೀಶರ ಬಗ್ಗೆ ಹೀಗೆ ಮಾತನಾಡುತ್ತೀರಿ. ಮಠಾಧೀಶರನ್ನ ಹಿಡಿದು ಮಂತ್ರಿಗಳು, ಮುಖ್ಯಮಂತ್ರಿಗಳಾಗೋ ಕಾಲ ಬಂತು ಅಂತಾರೆ, ಇದೆಲ್ಲಾ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.