ಬಳ್ಳಾರಿ :ಬಾಕಿ ವೇತನ ಹಾಗೂ ಸೇವಾಭದ್ರತೆಗೆ ಒತ್ತಾಯಿಸಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸೇವಾಭದ್ರತೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ - ಬಾಕಿ ವೇತನ ಹಾಗೂ ಸೇವಾಭದ್ರತೆ
ಕೂಡಲೇ ಉಪನ್ಯಾಸಕರಿಗೆ ವೇತನ ನೀಡಿ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯ..
ಪ್ರತಿಭಟನೆ
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಜಿಲ್ಲಾಧ್ಯಕ್ಷ ಡಾ.ಟಿ ದುರ್ಗಪ್ಪ, ರಾಜ್ಯದಲ್ಲಿ 14,500 ಅತಿಥಿ ಉಪನ್ಯಾಸಕರಿದ್ದಾರೆ. ಇವರಿಗೆ ಸರಿಯಾದ ವೇತನವಿಲ್ಲ. ಸಕಾಲಕ್ಕೆ ವೇತನ ನೀಡದ ಕಾರಣ ಮಾನಸಿಕ ಅಗಾತಕ್ಕೊಳಗಾಗಿ ರಾಜ್ಯದಲ್ಲಿ ಮೂವರು ಆತ್ಮಹತೆ ಮಾಡಿಕೊಂಡಿದ್ದಾರೆ. ಕೂಡಲೇ ಉಪನ್ಯಾಸಕರಿಗೆ ವೇತನ ನೀಡಿ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.