ಕರ್ನಾಟಕ

karnataka

ETV Bharat / state

ತುಂಗಾಭದ್ರ ಡ್ಯಾಂಗೆ ಕೃಷ್ಣಾ ನದಿ ಜೋಡಣೆ.. ಸಿಎಂಗೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮನವಿ - undefined

ತುಂಗಾಭದ್ರ ಜಲಾಶಯಕ್ಕೆ ಕೃಷ್ಣಾ ನದಿ ಜೋಡಿಸಬೇಕು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಸಿಎಂಗೆ ಜಿ.ಸೋಮಶೇಖರ್ ರೆಡ್ಡಿ ಮನವಿ

By

Published : Aug 5, 2019, 7:57 PM IST

ಬಳ್ಳಾರಿ: ತುಂಗಾಭದ್ರ ಜಲಾಶಯಕ್ಕೆ ಕೃಷ್ಣಾ ನದಿ ಜೋಡಿಸಬೇಕು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಜಿಲ್ಲೆಯ ತೋರಣಗಲ್ಲು ಜಿಂದಾಲ್ ಏರ್​ಪೋರ್ಟ್​ನಲ್ಲಿ ಬಿ ಎಸ್ ಯಡಿಯೂರಪ್ಪ ಅವರಿಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಕೃಷ್ಣಾ ನದಿಯನ್ನು ತುಂಗಭದ್ರಾ ಜಲಾಶಯಕ್ಕೆ ಜೋಡಿಸಿದರೆ ಮೂರು ಜಿಲ್ಲೆಗಳ ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆ ನೀಗಿಸಿದಂತಾಗುತ್ತದೆ ಎಂದು ವಿವರಿಸಿದ್ದಾರೆ.

ಶಾಸಕ ಸೋಮಶೇಖರ್ ರೆಡ್ಡಿ ಮನವಿ ಸ್ವೀಕರಿದ ಸಿಎಂ ಈ ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿಯೊಂದನ್ನು ನೀಡಿ ಮುಂದಿನ ಬಜೆಟ್‌ನಲ್ಲಿ ಘೋಷಿಸಿ ಅನುಷ್ಠಾನಗೊಳಿಸೋಣ ಎಂದು ಭರವಸೆ ನೀಡಿದರು.

ಸಿಎಂಗೆ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮನವಿ

ತುಂಗಭದ್ರ ಜಲಾಶಯಕ್ಕೆ ಇನ್ನೂ 70 ಟಿಎಂಸಿ ನೀರಿನ ಅಗತ್ಯವಿದೆ. 4 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನಿದಿಯಿಂದ ಹೊರ ಬಿಡಲಾಗುತ್ತದೆ. ಅದು ಸಮುದ್ರದ ಪಾಲಾಗುತ್ತದೆ. ಕೃಷ್ಣ ನದಿಯನ್ನು ತುಂಗಭದ್ರಾ ಜಲಾಶಯಕ್ಕೆ ಜೋಡಿಸಿದರೆ ನೀರು ಪ್ರಯೋಜನವಾಗುತ್ತದೆ. ಬಿ.ಎಸ್ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರ ನೇತೃತ್ವದಲ್ಲಿ ಇದು ಸಾಕಾರಗೊಂಡರೆ ರೈತರ ಬದುಕು ಬಂಗಾರವಾಗಲಿದೆ. ಕುಡಿಯುವ ನೀರಿನ ಸಮಸ್ಯೆಯೂ ಇರುವುದಿಲ್ಲ ಎಂದು ಜಿ.ಸೋಮಶೇಖರ್ ರೆಡ್ಡಿ ತಿಳಿಸಿದರು.

For All Latest Updates

TAGGED:

ABOUT THE AUTHOR

...view details