ಬಳ್ಳಾರಿ:ಬೆಳಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೆಳಗಲ್ ಒಂದು ಮತ್ತು ಎರಡನೇ ವಾರ್ಡ್, ಬೆಳಗಲ್ ತಾಂಡ ಮೂರು ಮತ್ತು ನಾಲ್ಕು ಜಾನೆಕುಂಟೆ, ಐದು ಜಾನೆಕುಂಟೆ ತಾಂಡ, ಆರು ಹರಗಿನ ದೋಣಿ, ಏಳು ಮತ್ತು ಎಂಟನೇ ವಾರ್ಡ್ಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ಮತದಾನ ನಡೆಯುತ್ತಿದೆ.
ಬೆಳಗ್ಗೆ 8ರಿಂದ 10 ಗಂಟೆಯ ಒಳಗೆ ಮಹಿಳೆಯರು ಹೆಚ್ಚಾಗಿ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದರು.
ಬೆಳಗಲ್ ಗ್ರಾಮ ಪಂಚಾಯತಿ:ಬೆಳಗಲ್ ಗ್ರಾಮ ಪಂಚಾಯತಿಯಿಂದ ಒಂದನೇ ವಾರ್ಡ್ನಲ್ಲಿ 12 ಅಭ್ಯರ್ಥಿಗಳು ಮತ್ತು ಎರಡನೇ ವಾರ್ಡ್ನಲ್ಲಿ 13 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಬೆಳಗ್ಗೆಯಿಂದಲೇ ಮತದಾನ ಮಾಡಲು ಯುವತಿಯರು, ಮಹಿಳೆಯರು ಆಗಮಿಸಿದ್ದರು. 84 ವರ್ಷದ ಹಿರಿಯ ನಾಗರಿಕರಾದ ಮಲ್ಲಮ್ಮ ಎಂಬುವರು ತಮ್ಮ ಮಗನೊಂದಿಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಮೊದಲನೇ ಹಂತದ ಮತದಾನ ಜಾನೆಕುಂಟೆ ಗ್ರಾಮ: 2 ಸ್ಥಾನಕ್ಕೆ 7 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಈ ಪ್ರದೇಶದಲ್ಲಿ ಯುವಕರು ಮತದಾನ ಮಾಡಲು ಮುಂದಾಗಿದ್ದರು. ಇಲ್ಲಿ ಯುವಕರು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಹಿರಿಯರು ಮಾತ್ರ ಸ್ಪರ್ಧೆ ಮಾಡಿದ್ದಾರೆ.
ಜಾನೆಕುಂಟೆ ತಾಂಡ ಗ್ರಾಮ: 2 ಸ್ಥಾನಕ್ಕೆ 5 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಒಬ್ಬ ಮಹಿಳಾ ಅಭ್ಯರ್ಥಿ, ಒಬ್ಬ ಸಾಮಾನ್ಯ ಅಭ್ಯರ್ಥಿ ಸ್ಪರ್ಧೆ ಮಾಡಿದ್ದಾರೆ.
ಬೆಳಗಲ್ ತಾಂಡ ಗ್ರಾಮ: ಎರಡು ವಾರ್ಡ್ಗಳ 7 ಸ್ಥಾನಕ್ಕೆ 23 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಈ ಗ್ರಾಮಗಳಲ್ಲಿ ಮತದಾನ ಮಾಡಲು ನೂರಾರು ಮಹಿಳೆಯರು, ಯುವತಿಯರು, ಯುವಕರು ಮತದಾನ ಮಾಸ್ಕ್ಗಳನ್ನು ಧರಿಸಿ ಮತದಾನ ಮಾಡಲು ಮುಗಿಬಿದ್ದರು. ಆದರೆ ಇಲ್ಲಿ ಯಾವುದೇ ಸಾಮಾಜಿಕ ಅಂತರವಿರಲಿಲ್ಲ. ಬಳ್ಳಾರಿ ಜಿಲ್ಲೆಯ ಮೊದಲನೇ ಹಂತದ 5 ತಾಲೂಕುಗಳ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇಂದು ಬೆಳಗ್ಗೆ ಗಂಟೆಗೆ 12ರಷ್ಟು ಮತದಾನವಾಗಿದೆ.
5 ತಾಲೂಕುಗಳ ಗ್ರಾಮ ಪಂಚಾಯತಿ ಬೆಳಗ್ಗೆ 11 ಗಂಟೆಗೆ ಮತದಾನ ಶೇಕಡಾವಾರು 32.01 ಆಗಿದೆ.