ಕರ್ನಾಟಕ

karnataka

ETV Bharat / state

ಬಳ್ಳಾರಿ 2ನೇ ಹಂತದ ಗ್ರಾಪಂ ಚುನಾವಣೆ.. 2,564 ಸ್ಥಾನಗಳಿಗೆ 7,876 ಅಭ್ಯರ್ಥಿಗಳಿಂದ ನಾಮಪತ್ರ - ಬಳ್ಳಾರಿ ಚುನಾವಣಾ ಸುದ್ದಿ

ಡಿಸೆಂಬರ್ 16ಕ್ಕೆ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದೆ. ಸದ್ಯ 2564 ಸ್ಥಾನಗಳಿಗೆ ಬರೋಬ್ಬರಿ 7,876 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಬಳ್ಳಾರಿ
ಬಳ್ಳಾರಿ

By

Published : Dec 18, 2020, 9:46 AM IST

Updated : Dec 18, 2020, 2:40 PM IST

ಬಳ್ಳಾರಿ :ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ 2ನೇ ಹಂತದ ಚುನಾವಣೆಯ ನಿಮಿತ್ತ ಡಿಸೆಂಬರ್ 16ಕ್ಕೆ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದೆ. ಅಂದಾಜು 2,564 ಸ್ಥಾನಗಳಿಗೆ ಬರೋಬ್ಬರಿ 7,876 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲೆಯ ಸಂಡೂರು ತಾಲೂಕಿನ 26 ಗ್ರಾಪಂಗಳ 511 ಸದಸ್ಯ ಸ್ಥಾನಗಳಿಗೆ 1,566, ಕೂಡ್ಲಿಗಿ ತಾಲೂಕಿನ 25 ಗ್ರಾಪಂಗಳ 482 ಸದಸ್ಯ ಸ್ಥಾನಗಳಿಗೆ 1,404, ಹಗರಿಬೊಮ್ಮನಹಳ್ಳಿ ತಾಲೂಕಿನ 19 ಗ್ರಾಪಂಗಳ 338 ಸದಸ್ಯ ಸ್ಥಾನಗಳಿಗೆ 945, ಕೊಟ್ಟೂರು ತಾಲೂಕಿನ 13 ಗ್ರಾಪಂಗಳ 195 ಸದಸ್ಯ ಸ್ಥಾನಗಳಿಗೆ 620 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಹಡಗಲಿ ತಾಲೂಕಿನ 26 ಗ್ರಾಪಂಗಳ 430 ಸದಸ್ಯ ಸ್ಥಾನಗಳಿಗೆ 1318, ಹರಪನಹಳ್ಳಿ ತಾಲೂಕಿನ 35 ಗ್ರಾಪಂಗಳ 608 ಸದಸ್ಯ ಸ್ಥಾನಗಳಿಗೆ 2,023 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟಾರೆ 237 ಗ್ರಾಪಂಗಳಲ್ಲಿ 4,399 ಸದಸ್ಯ ಸ್ಥಾನಗಳಿವೆ. ಅವುಗಳಲ್ಲಿ 232 ಗ್ರಾಪಂಗಳ 4316 ಸದಸ್ಯ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

Last Updated : Dec 18, 2020, 2:40 PM IST

ABOUT THE AUTHOR

...view details